ಲೀಗ್ ಮುಗಿಯುವ ಮುನ್ನ ಈ ಘಟನೆ ನಡೆದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಆದರೆ ಈ ಘಟನೆಯನ್ನು ಮರೆಯುವ ಮುನ್ನವೇ ಭಾನುವಾರ ಜಡೇಜಾ ಮಾಡಿರುವ ಟ್ವೀಟ್ ಸಂಚಲನ ಮೂಡಿಸಿದೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. " ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಶೀಘ್ರದಲ್ಲಿ ಅಥವಾ ತಡವಾಗಿಯಾದರೂ ಖಂಡಿತವಾಗಿ ಬರುತ್ತದೆ " ಎಂದು ಟ್ವೀಟ್ ಮಾಡಿದ್ದಾರೆ. (ಪಿಸಿ: ಟ್ವಿಟರ್)
ಇನ್ನು ಈ ಋತುವಿನಲ್ಲಿ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾಗ ಧೋನಿ ಅಭಿಮಾನಿಗಳು ಮೈದಾನದಲ್ಲಿ ಜಡೇಜಾ ಔಟಾಗಲಿ ಎಂದು ಫ್ಲೆಕ್ಸ್ಗಳನ್ನು ಪ್ರದರ್ಶಿಸುತ್ತಿರುವುದು ಗೊತ್ತೇ ಇದೆ. ಬೌಲಿಂಗ್‌ನಲ್ಲಿ ಮಿಂಚಿದರೂ ಯಾರೂ ತನ್ನತ್ತ ಗಮನ ಹರಿಸುತ್ತಿಲ್ಲ ಎಂಬ ಆತಂಕ ಜಡೇಜಾ ಮೇಲಿದೆ ಎಂಬುದು ಅವರ ಅಭಿಮಾನಿಗಳ ಆರೋಪ. ಇದೆಲ್ಲಾ ಬೆಳವಣಿಗೆಯಿಂದ ಮುಂದಿನ ಋತುವಿನಲ್ಲಿ ಜಡೇಜಾ ಚೆನ್ನೈ ಪರ ಆಡುವುದು ಅನುಮಾನ ಎನ್ನಲಾಗುತ್ತಿದೆ.