IPL 2023: ಐಪಿಎಲ್ 2023 ಉಚಿತವಾಗಿ ನೋಡಿ, ಜಿಯೋದಿಂದ ಬಂಪರ್ ಆಫರ್
IPL 2023: ಈಗಾಗಲೇ ಐಪಿಎಲ್ 16ನೇ ಸೀಸನ್ ಪ್ರಸಾರ ಹಕ್ಕನ್ನು Viacom18 ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಐಪಿಎಲ್ ಅನ್ನು ನೀವು ವೂಟ್ ಆ್ಯಪ್ ಮೂಲಕ ನೋಡಬಹುದು. ಆದರೆ ಐಪಿಎಲ್ ಕ್ರೇಜ್ ಹೆಚ್ಚಿಸಲು ರಿಲಯನ್ಸ್ ಜಿಯೋ ಭರ್ಜರಿ ತಯಾರಿ ನಡೆಸಿದೆ.
ಐಪಿಎಲ್ 2023ರ (IPL-2023) ಮಿನಿ ಹರಾಜು ಪ್ರಕ್ರಿಯೆ ಈಗಾಗಲೇ ಅಂತ್ಯಗೊಂಡಿದ್ದು, ಎಲ್ಲಾ 10 ತಂಡಗಳು ತಮ್ಮ ಟೀಂ ಅನ್ನು ಬಲಿಷ್ಠವಾಗಿ ಕಟ್ಟಿಕೊಂಡಿದೆ. ಅದರಲ್ಲಿಯೂ ಕೋಟಿ ಕೋಟಿ ಸುರಿದು ಆಟಗಾರರನ್ನು ಪ್ರಾಂಚೈಸಿಗಳು ಖರೀದಿಸಿದೆ. ಈ ಬಾರಿ ಐಪಿಎಲ್ ಏಪ್ರಿಲ್ ಮೊದಲ ವಾರದಲ್ಲಿ ಆರಂಭವಾಗಲಿದೆ.
2/ 8
ಈಗಾಗಲೇ ಐಪಿಎಲ್ 16ನೇ ಸೀಸನ್ ಪ್ರಸಾರ ಹಕ್ಕನ್ನು Viacom18 ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಐಪಿಎಲ್ ಅನ್ನು ನೀವು ವೂಟ್ ಆ್ಯಪ್ ಮೂಲಕ ನೋಡಬಹುದು. ಆದರೆ ಐಪಿಎಲ್ ಕ್ರೇಜ್ ಹೆಚ್ಚಿಸಲು ರಿಲಯನ್ಸ್ ಜಿಯೋ ಭರ್ಜರಿ ತಯಾರಿ ನಡೆಸಿದೆ.
3/ 8
ಹೌದು, ಐಪಿಎಲ್ ಡಿಜಿಟಲ್ ಲೈವ್ ಸ್ಟ್ರೀಮಿಂಗ್ ಹಕ್ಕನ್ನು ಜಿಯೋ ಪಡೆದುಕೊಂಡಿದೆ. ಹೀಗಾಗಿ ಜಿಯೋ ತನ್ನ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಸಂಪೂರ್ಣ ಐಪಿಎಲ್ ಅನ್ನು ಉಚಿತವಾಗಿ ಸ್ಟ್ರೀಮ್ ಮಾಡಲು ಯೋಚಿಸುತ್ತಿದೆ ಎಂದು ವರದಿಯಾಗಿದೆ.
4/ 8
ಈ ಬಾರಿ ನಡೆದ ಫಿಫಾ ವಿಶ್ವಕಪ್ 2022 ಅನ್ನೂ ಸಹ ಜಿಯೋ ಪ್ರಸಾರ ಹಕ್ಕನ್ನು ಪಡೆದಿತ್ತು. ಅದೇ ರೀತಿ ಇದೀಗ ಜಿಯೋ ಐಪಿಎಲ್ ಪ್ರಸಾರವನ್ನೂ ಸಹ ಉಚಿತವಾಗಿ ನೀಡಲು ಸಿದ್ಧವಾಗಿದೆ ಎಂದು ತಿಳಿದುಬಂದಿದೆ. ನೀವು ಜಿಯೋ ಆ್ಯಪ್ನಲ್ಲಿ ಮೂಲಕ ಉಚಿತ ವೀಕ್ಷಣೆ ಮಾಡಬಹುದಾಗಿದೆ.
5/ 8
ಐಪಿಎಲ್ 2023ರ ಡಿಜಿಟಲ್ ಹಕ್ಕುದಾರರಾದ Viacom18 ಈ ಬಾರಿ ವೀಕ್ಷಕರಿಗೆ ಸಹಾಯವಾಗುವಂತೆ ಉಚಿತವಾಗಿ ಪ್ರಸಾರ ಮಾಡುವ ನಿರ್ಧರಿಸುವ ಸಾಧ್ಯತೆ ಇದೆ. ಈ ಮೂಲಕ ಜಿಯೋ ಸಿನೆಮಾ ಆ್ಯಪ್ ಮೂಲಕ ಲೈವ್ ಪಂದ್ಯವನ್ನು ನೋಡಬಹುದಾಗಿದೆ.
6/ 8
ಜಿಯೋ ಕಂಪನಿ ಮುಂಬರಲಿರುವ ಐಪಿಎಲ್ 2023ರಿಂದ 2027ರ ವರೆಗಿನ ಡಿಜಿಟಲ್ ಮಾಧ್ಯಮ ಹಕ್ಕುನ್ನು ಪಡೆದಿದೆ. ಅದೂ ಸಹ ಬರೋಬ್ಬರಿ 23,758 ಕೋಟಿಗೆ ಖರೀದಿಸಿದೆ. ಅಲ್ಲದೇ ಈ ಬಾರಿಯ ಫಿಫಾ ವಿಶ್ವಕಪ್ನ್ನೂ ಸಹ ಜಿಯೋ ಸಂಪೂರ್ಣವಾಗಿ ಉಚಿತವಾಗಿ ನೀಡಿತ್ತು.
7/ 8
ಫಿಫಾ ವಿಶ್ವಕಪ್ 2022 ವನ್ನು ಉಚಿತವಾಗಿ ನೀಡುವ ಮೂಲಕ ಜಿಯೋ 300 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಿದೆ. ಹೀಗಾಗಿ ಐಪಿಎಲ್ ಸಹ ಉಚಿತವಾಗಿ ನೀಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ. ಇನ್ನು, ಟಿವಿ ರೈಟ್ಸ್ ಈಗಲೂ ಸ್ಟಾರ್ ಸ್ಪೋರ್ಟ್ಸ್ ಬಳಿಯೇ ಉಳಿದಿದೆ.
8/ 8
ಮುಂಬರುವ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಲ್ಲಲಿ ಮಾತ್ರವಲ್ಲದೇ ರಾಜ್ಯದ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿ ಮೈದಾನಗಳಲ್ಲಿಯೂ ನಡೆಸಲು ಚಿಂತನೆ ಮಾಡಲಾಗುತ್ತಿದೆ. ಈ ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬೇಕಾದ ಮೈದಾನಗಳು ಹಾಗೂ ಎಲ್ಲಾ ಮೂಲ ಸೌಕರ್ಯಗಳೂ ಇವೆ.