Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

Jasprit Bumrah: ಜಸ್ಪ್ರೀತ್ ಬುಮ್ರಾ ಅವರು ಮಾರ್ಚ್ ಅಂತ್ಯದವರೆಗೆ ನ್ಯೂಜಿಲೆಂಡ್‌ನಲ್ಲಿ ಇರುತ್ತಾರೆ. ಅಲ್ಲದೆ, ಬುಮ್ರಾ ಪುನರಾಗಮನಕ್ಕೆ ಬಿಸಿಸಿಐ ವೈದ್ಯಕೀಯ ತಂಡ ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದೆ.

First published:

  • 17

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ನ್ಯೂಜಿಲೆಂಡ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಜನಪ್ರಿಯ ಕ್ರೀಡಾ ವೆಬ್‌ಸೈಟ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಸೋಮವಾರ ಅವರ ಬೆನ್ನಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

    MORE
    GALLERIES

  • 27

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಬುಮ್ರಾ ಅವರು ಮಾರ್ಚ್ ಅಂತ್ಯದವರೆಗೆ ನ್ಯೂಜಿಲೆಂಡ್‌ನಲ್ಲಿ ಇರುತ್ತಾರೆ. ಅಲ್ಲದೆ, ಬುಮ್ರಾ ಪುನರಾಗಮನಕ್ಕೆ ಬಿಸಿಸಿಐ ವೈದ್ಯಕೀಯ ತಂಡ ಮಾರ್ಗಸೂಚಿಯನ್ನು ಸಹ ಸಿದ್ಧಪಡಿಸಿದೆ.

    MORE
    GALLERIES

  • 37

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಬುಮ್ರಾ ಜುಲೈವರೆಗೆ ಬೆಡ್ ರೆಸ್ಟ್‌ಗೆ ಸೀಮಿತವಾಗಲಿದ್ದಾರೆ. ಆಗಸ್ಟ್ ನಲ್ಲಿ ಮತ್ತೊಮ್ಮೆ ಬೌಲಿಂಗ್ ಅಭ್ಯಾಸ ನಡೆಸುವ ಸಾಧ್ಯತೆ ಇದೆ. ಮೊದಲ ಕೆಲವು ದಿನ ಅವರು ಕೇವಲ ಓಟಕ್ಕೆ ಸೀಮಿತವಾಗಿರಬಹುದು.

    MORE
    GALLERIES

  • 47

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಬಳಿಕ ತೀವ್ರ ಕಸರತ್ತು ನಡೆಸುವ ಸಾಧ್ಯತೆ ಇದೆ ಎಂದು ಕ್ರಿಕ್ ಇನ್ಫೋ ತಿಳಿಸಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಂತ್ಯದ ವೇಳೆಗೆ ಅವರನ್ನು ಸಿದ್ಧಪಡಿಸುವ ಉದ್ದೇಶದಿಂದ ಬಿಸಿಸಿಐ ಈ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ ಎಂಬ ವರದಿಗಳಿವೆ.

    MORE
    GALLERIES

  • 57

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ್ದರು. ಬಳಿಕ ಬೆನ್ನುನೋವಿನಿಂದಾಗಿ ಕ್ರಿಕೆಟ್‌ನಿಂದ ದೂರವಿದ್ದರು. ಈ ಕ್ರಮದಲ್ಲಿ ಏಷ್ಯಾಕಪ್ ಆಡಲಿಲ್ಲ. ನಂತರ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ವಾಪಸಾಗಿದ್ದರು.

    MORE
    GALLERIES

  • 67

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಆದರೆ ಮೂರನೇ ಟಿ20 ಪಂದ್ಯಕ್ಕೂ ಮುನ್ನ ಅವರ ಗಾಯ ಉಲ್ಬಣಗೊಂಡು ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ನಂತರ, ಅವರು ಟಿ20 ವಿಶ್ವಕಪ್‌ನಿಂದ ಹೊರಬಿದ್ದರು. ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

    MORE
    GALLERIES

  • 77

    Jasprit Bumrah: ಬುಮ್ರಾ ಶಸ್ತ್ರಚಿಕಿತ್ಸೆ ಯಶಸ್ವಿ, ಸ್ಟಾರ್​​ ಬೌಲರ್​ ಕಣಕ್ಕಿಳಿಯಲು ಬಿಸಿಸಿಐ ಮುಹೂರ್ತ ಫಿಕ್ಸ್

    ಆದರೆ, ಬೆನ್ನಿನ ಸಮಸ್ಯೆಯಿಂದಾಗಿ ಸರಣಿಯಿಂದ ಹಿಂದೆ ಸರಿದಿದ್ದರು. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಮತ್ತೊಮ್ಮೆ ಪರೀಕ್ಷಿಸಿ ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ತೀರ್ಮಾನಿಸಿದೆ. ಹಾಗಾಗಿ ಅವರನ್ನು ನ್ಯೂಜಿಲೆಂಡ್‌ಗೆ ಕಳುಹಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.

    MORE
    GALLERIES