IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

IPL 2023: ಭಾರತೀಯ ಕ್ರಿಕೆಟ್ ತಂಡ ಮತ್ತು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಐಪಿಎಲ್​ ಆರಂಭಕ್ಕೂ ಮುನ್ನ ಆಘಾತವಾಗಿದೆ. ತಂಡದ ಸ್ಟಾರ್​ ಬೌಲರ್​ ತಂಡದಿಂದ ಹೊರನಡೆದಿದ್ದಾರೆ.

First published:

  • 18

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಐಪಿಎಲ್ 2023ರ ಟ6ನೇ ಸೀಸನ್​ ಆರಂಭಕ್ಕೆ ಇನ್ನೇನು ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. ಮಾರ್ಚ್ 31ರಿಂದ ಈ ಬಾರಿಯ ಐಪಿಎಲ್​ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಸೆಣಸಾಡಲಿದೆ.

    MORE
    GALLERIES

  • 28

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಆದರೆ ಇದಕ್ಕೂ ಮುನ್ನ, ಭಾರತೀಯ ಕ್ರಿಕೆಟ್ ತಂಡ ಮತ್ತು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್​ 2023ರಿಂದ ಔಟ್​ ಆಗಿದ್ದಾರೆ.

    MORE
    GALLERIES

  • 38

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಬಾರ್ಡರ್ ಗವಾಸ್ಕರ್ ಟ್ರೋಫಿಯಿಂದ ಹೊರಗುಳಿದ ನಂತರ, 28 ವರ್ಷದ ಬುಮ್ರಾ ಐಪಿಎಲ್ 2023 ಮತ್ತು ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬುಮ್ರಾ ಇದೀಗ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪುನರಾಗಮನ ಮಾಡಬಹುದು.

    MORE
    GALLERIES

  • 48

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕಳೆದ 7 ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಬುಮ್ರಾ ಬೆನ್ನುನೋವಿನ ಸಮಸ್ಯೆ ಮುನ್ನೆಲೆಗೆ ಬಂದಿತ್ತು. ಹೀಗಾಗಿ ಬುಮ್ರಾ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.

    MORE
    GALLERIES

  • 58

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಇದರ ನಂತರ ಅವರು ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಪುನರಾಗಮನ ಮಾಡಿದರು. ಆದರೆ 2 ಪಂದ್ಯಗಳ ನಂತರ ಅವರನ್ನು ಕೈಬಿಡಲಾಯಿತು. ಇದಾದ ನಂತರ ಬುಮ್ರಾ ಟಿ20 ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು.

    MORE
    GALLERIES

  • 68

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ವರದಿಗಳ ಪ್ರಕಾರ, ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅವರು ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಅವರು ತಮ್ಮ ಕೊನೆಯ ಪಂದ್ಯವನ್ನು ಸೆಪ್ಟೆಂಬರ್‌ನಲ್ಲಿ ಆಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಎನ್​ಸಿಎ ಗ್ರೀನ್ ಸಿಗ್ನಲ್ ನೀಡಿರಲಿಲ್ಲ.

    MORE
    GALLERIES

  • 78

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಜಸ್ಪ್ರೀತ್ ಬುಮ್ರಾ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನರ್ವಸತಿಗೆ ಒಳಗಾಗಿದ್ದಾರೆ. ಇತ್ತೀಚೆಗಷ್ಟೇ ಬುಮ್ರಾ ಅವರು ನೆಟ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

    MORE
    GALLERIES

  • 88

    IPL 2023: ರೋಹಿತ್​ ಪಡೆಗೆ ಬಿಗ್​ ಶಾಕ್​, ಸ್ಟಾರ್​​ ಬೌಲರ್​ ಐಪಿಎಲ್​ನಿಂದ ಔಟ್​?

    ಬಿಸಿಸಿಐ ಮತ್ತು ತಂಡದ ವ್ಯವಸ್ಥಾಪಕರು ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಬುಮ್ರಾ ಅವರನ್ನು ಮರಳಿ ಪಡೆಯುವ ಗುರಿಯನ್ನು ಹೊಂದಿದ್ದಾರೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹೀಗಾಗಿ ಅವರು ಐಪಿಎಲ್​ ಆಡುವುದು ಅನುಮಾನವಾಗಿದೆ.

    MORE
    GALLERIES