ಜೇಸನ್ ರಾಯ್ ಅವರ ಅಮೋಘ ಶತಕದ ನೆರವಿನಿಂದ ಕ್ವೆಟ್ಟಾ ಗ್ಲಾಡಿಯೇಟರ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ 3ನೇ ಗರಿಷ್ಠ ರನ್ ಚೇಸ್ ಮಾಡಿದ ದಾಖಲೆಗೆ ಪಾತ್ರವಾಯಿತು. ಹಾಗೂ ಟಿ20 ಲೀಗ್ಗಳಲ್ಲಿ (ಅಂತರಾಷ್ಟ್ರೀಯ ಪಂದ್ಯ ಹೊರತುಪಡಿಸಿ) ಗರಿಷ್ಠ ರನ್ ಚೇಸ್ ಮಾಡಿದ ದಾಖಲೆಗೆ ಪಾತ್ರವಾಯಿತು. ಅಲ್ಲದೆ ಇದು ಪಿಎಸ್ಎಲ್ ಇತಿಹಾಸದಲ್ಲಿ 3ನೇ ಗರಿಷ್ಠ ಮೊತ್ತ ದಾಖಲಿಸಿದೆ.
ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ನೀಡಿದ್ದ 244ರನ್ಗಳ ಬೃಹತ್ ಮೊತ್ತವನ್ನು ಚೇಸ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. 2ನೇ ಸ್ಥಾನದಲ್ಲಿ ಬಲ್ಗೇರಿಯಾ ತಂಡವಿದ್ದು, ಇದು ಸರ್ಬಿಯಾ ವಿರುದ್ಧ 2022ರಲ್ಲಿ 243 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ ಗ್ಲಾಡಿಯೇಟರ್ ಗರಿಷ್ಠ ಮೊತ್ತ ಚೇಸ್ ಮಾಡಿದ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ವಿಚಿತ್ರವೆಂದರೆ ಅದ್ಭುತ ಫಾರ್ಮ್ನಲ್ಲಿರುವ ಜೇಸನ್ ರಾಯ್ 2023ರ ಮಿನಿ ಐಪಿಎಲ್ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದರು. 2022ರ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡ 2 ಕೋಟಿ ರೂಪಾಯಿಗಳಿಗೆ ರಾಯ್ರನ್ನು ಖರೀದಿಸಿತ್ತು. ಆದರೆ ಆ ಆವೃತ್ತಿಯಿಂದ ರಾಯ್ ತಾವಾಗಿಯೇ ಆಡದಿರಲು ತೀರ್ಮಾನಿಸಿದ್ದರು. ಈ ಕಾರಣದಿಂದ ಈ ವರ್ಷದ ಹರಾಜಿನಲ್ಲಿ ಅವರನ್ನು ಯಾವ ತಂಡಗಳೂ ಖರೀದಿಸರಲಿಲ್ಲ.