ಸದ್ಯ ಕೊಹ್ಲಿ ವಯಸ್ಸು 33 ವರ್ಷ ಆಗಿದೆ. ಅವರು ಇನ್ನೂ 4 ವರ್ಷಗಳ ಕಾಲ ಕ್ರಿಕೆಟ್ ಆಡುವುದು ಖಚಿತ. ಆ ಲೆಕ್ಕಾಚಾರದ ಪ್ರಕಾರ ಕೊಹ್ಲಿ ವರ್ಷಕ್ಕೆ ಟೆಸ್ಟ್ ನಲ್ಲಿ 6 ಶತಕ ಸಿಡಿಸಬೇಕು. ಆದರೆ ಸಚಿನ್ ಅವರ ಟೆಸ್ಟ್ ಶತಕಗಳ ದಾಖಲೆಯನ್ನು ಸರಿಗಟ್ಟುವುದು ಕೊಹ್ಲಿಗೆ ಅಸಾಧ್ಯ ಎಂದು ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕಗಳ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಸಚಿನ್ ಪಾತ್ರರಾಗಿದ್ದಾರೆ. ಸಚಿನ್ ಟೆಸ್ಟ್ ಮತ್ತು ODI ಎರಡರಲ್ಲೂ ಸೇರಿ ಒಟ್ಟು 100 ಶತಕಗಳನ್ನು ಗಳಿಸಿದ್ದಾರೆ. ಕೊಹ್ಲಿ ಇದುವರೆಗೆ 73 ಶತಕ ಸಿಡಿಸಿದ್ದಾರೆ. ಇದರಲ್ಲಿ 45 ODIಗಳು, 27 ಟೆಸ್ಟ್ಗಳು ಮತ್ತು ಒಂದು T20 ಶತಕ ಸೇರಿದೆ. ಸಚಿನ್ ಅವರ ಶತಕಗಳ ಶತಕವನ್ನು ತಲುಪಲು ಕೊಹ್ಲಿ ಇನ್ನೂ 27 ಶತಕಗಳನ್ನು ಬಾರಿಸಬೇಕಾಗಿದೆ.