2018 ರಲ್ಲಿ, ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ಕಾರಣ ಯೂಸುಫ್ ಪಠಾಣ್ ಅವರನ್ನು ಮಂಡಳಿಯು 5 ತಿಂಗಳ ಕಾಲ ನಿಷೇಧಿಸಿತ್ತು. ಆದರೂ ಉದ್ದೇಶಪೂರ್ವಕವಾಗಿ ತಾನು ಮಾಡಿಲ್ಲ ಎಂದು ಪಠಾಣ್ ಹೇಳಿದ್ದರು. ಗಂಟಲಿನ ಸೋಂಕಿಗೆ ಅವರು ಸೇವಿಸಿದ್ದ ಔಷಧದಲ್ಲಿ ನಿಷೇಧಿತ ವಸ್ತುವಿತ್ತು. ನನಗೆ ಇದರ ಅರಿವಿರಲಿಲ್ಲ. ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನಾನು ಅದನ್ನು ಬಳಸಲಿಲ್ಲ ಎಂದು ಹೇಳಿದ್ದರು.
ಎಡಗೈ ವೇಗದ ಬೌಲರ್ ಪ್ರದೀಪ್ ಸಾಂಗ್ವಾನ್ ಕೂಡ ಡೋಪ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಐಪಿಎಲ್ 2013ರಲ್ಲಿ ನಿಷೇಧಿತ ಮದ್ದು ಸೇವಿಸಿದ ಆರೋಪದಲ್ಲಿ ದೆಹಲಿ ಬೌಲರ್ ಸಾಂಗ್ವಾನ್ ತಪ್ಪಿತಸ್ಥರು ಎಂದು ಹೇಳಲಾಗಿತ್ತು. ಇದಾದ ಬಳಿಕ ಬಿಸಿಸಿಐ ಅವರಿಗೆ 18 ತಿಂಗಳ ನಿಷೇಧ ಹೇರಿತ್ತು. ಆದರೆ, ಇದಾದ ಬಳಿಕ ಮತ್ತೆ ಕ್ರಿಕೆಟ್ಗೆ ಮರಳಿದರು. 2008ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು.