ಡಿಸೆಂಬರ್ 5 ರಂದು ಶಿಖರ್ ಧವನ್ 37 ನೇ ವರ್ಷಕ್ಕೆ ಕಾಲಿಡುತ್ತಾರೆ. ಈ ಕ್ರಮದಲ್ಲಿ ಮುಂದಿನ ವರ್ಷ ನವೆಂಬರ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ಶಿಖರ್ ಧವನ್ ಆಯ್ಕೆಯಾಗುವುದು ಅನುಮಾನ. ಈಗ ತಂಡದಲ್ಲಿದ್ದರೂ ಸ್ಥಿರವಾಗಿ ಆಡುತ್ತಿಲ್ಲ. ಅದರಲ್ಲೂ ಕಡಿಮೆ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡುವುದು ಧವನ್ ಗೆ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಕೆಲ ದಿನಗಳ ಹಿಂದೆ ಧವನ್ ಮುಂಬರು ವಿಶ್ವಕಪ್ ಆಡುವುದು ನನ್ನ ಗುರಿ ಎಂದು ಹೇಳಿದ್ದರು.
ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅವರು 68 ಎಸೆತಗಳಲ್ಲಿ 40 ರನ್ ಗಳಿಸಿದರು. ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ 16 ಎಸೆತಗಳಲ್ಲಿ 4 ಮತ್ತು 14 ಎಸೆತಗಳಲ್ಲಿ 8 ರನ್ ಗಳಿಸಿದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು 77 ಎಸೆತಗಳಲ್ಲಿ 72 ರನ್ ಗಳಿಸಿದ್ದರು. ಆದರೆ, ಮಳೆಯಿಂದಾಗಿ ರದ್ದಾದ ಎರಡನೇ ಏಕದಿನ ಪಂದ್ಯದಲ್ಲಿ ಅವರು 10 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ್ದರು. ಶಿಖರ್ ಧವನ್ ಅವರ ಆರಂಭಿಕ ಸ್ಥಾನಕ್ಕಾಗಿ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಪೈಪೋಟಿ ನಡೆಸುತ್ತಿದ್ದಾರೆ. ಈ ಕ್ರಮದಲ್ಲಿ ಧವನ್ ತಮ್ಮ ಸ್ಟ್ರೈಕ್ ರೇಟ್ ಜೊತೆಗೆ ಸ್ಥಿರತೆ ತೋರಬೇಕಿದೆ. ಇಲ್ಲದಿದ್ದರೆ ಟೀಂ ಇಂಡಿಯಾ ದೂರ ಉಳಿಯಬೇಕಾಗುತ್ತದೆ.
ರಿಷಬ್ ಪಂತ್ ಕೂಡ ಸದ್ಯ ಯಾವುದೇ ಫಾರ್ಮ್ನಲ್ಲಿಲ್ಲ. ಅವರನ್ನು ಕೈಬಿಡುವಂತೆ ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ (ಔಟಾಗದೆ 125) ಗಳಿಸಿದ ನಂತರ ವಿಫಲರಾಗುತ್ತಿದ್ದಾರೆ. ಸೀಮಿತ ಓವರ್ ಕ್ರಿಕೆಟ್ನಲ್ಲಿ ಪಂತ್ ಅವರ ಕೊನೆಯ ಐದು ಇನ್ನಿಂಗ್ಸ್ಗಳು ಕ್ರಮವಾಗಿ 3, 6, 6, 11, 15. ಪಂತ್ ಇಲ್ಲದೆ ಸ್ಯಾಮ್ಸನ್ಗೆ ಅವಕಾಶ ನೀಡುಬೇಖು ಎಂಬ ಕೂಗು ಕೇಳಿಬರುತ್ತಿದೆ.
ಈ ಪಟ್ಟಿಯಲ್ಲಿ ಮೂರನೇ ಆಟಗಾರ ಶಾರ್ದೂಲ್ ಠಾಕೂರ್. ಶಾರ್ದೂಲ್ ಸ್ಥಿರ ಪ್ರದರ್ಶನ ನೀಡಿದ್ದರೆ ಟೀಂ ಇಂಡಿಯಾಕ್ಕೆ ಉತ್ತಮ ಆಲ್ ರೌಂಡರ್ ಆಗುತ್ತಿದ್ದರು. ಅಲ್ಲದೇ ಅವರ ಜಾಗಕ್ಕೆ ಇದೀಗ ಬುಮ್ರಾ ಸಹ ಮರಳಲಿದ್ದಾರೆ. ಜೊತೆಗೆ ಸಿರಾಜ್, ಶಮಿ, ಭುವಿ, ಅರ್ಶ್ ದೀಪ್, ಉಮ್ರಾನ್ ಮಲಿಕ್ ಮತ್ತು ದೀಪಕ್ ಚಾಹರ್ ಕೂಡ ಇರುವುದರಿಂದ ಶಾರ್ದೂಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ.