ಜೋ ರೂಟ್: ಐಪಿಎಲ್ 2023ರ ಹರಾಜಿಗೆ ನೋಂದಾಯಿಸಲಾದ 27 ಇಂಗ್ಲೆಂಡ್ ಆಟಗಾರರಲ್ಲಿ ಜೋ ರೂಟ್ ಒಬ್ಬರು. ಬೆನ್ ಸ್ಟೋಕ್ಸ್ಗೆ ಟೆಸ್ಟ್ ನಾಯಕತ್ವವನ್ನು ಹಸ್ತಾಂತರಿಸಿದ ರೂಟ್, ತಮ್ಮ 27 ವರ್ಷಗಳ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಐಪಿಎಲ್ ಹರಾಜಿನಲ್ಲಿ ಲಭ್ಯವಿದ್ದಾರೆ. ಅವರು ಕೊನೆಯ ಬಾರಿಗೆ 2019ರಲ್ಲಿ T20I ಆಡಿದ್ದರು. ರೂಟ್ 32 T20I ಗಳಲ್ಲಿ 126.31 ಸ್ಟ್ರೈಕ್ ರೇಟ್ನಲ್ಲಿ 893 ರನ್ ಗಳಿಸಿದ್ದಾರೆ.
ಮೊಹಮ್ಮದ್ ನಬಿ: ಟಿ20 ವಿಶ್ವಕಪ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಬಿ ಅಫ್ಘಾನಿಸ್ತಾನದ ನಾಯಕತ್ವದಿಂದ ಕೆಳಗಿಳಿದರು. 37ನೇ ವಯಸ್ಸಿನಲ್ಲಿ, ಮೊಹಮ್ಮದ್ ನಬಿ ಐಪಿಎಲ್ ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ನಡೆದ ಹರಾಜಿನಲ್ಲಿ ನಬಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಖರೀದಿಸಿತ್ತು. ಐಪಿಎಲ್ನಲ್ಲಿ ಅವರು 17 ಪಂದ್ಯಗಳಲ್ಲಿ 180 ರನ್ ಗಳಿಸಿದ್ದಾರೆ. ಅಲ್ಲದೇ 13 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.
ಮೋಸೆಸ್ ಹೆನ್ರಿಕ್ಸ್: ಐಪಿಎಲ್ನಲ್ಲಿ ಮೋಸೆಸ್ ಹೆನ್ರಿಕ್ಸ್ ಉತ್ತಮ ಅನುಭವ ಹೊಂದಿದ್ದಾರೆ. ಅವರು 62 ಪಂದ್ಯಗಳನ್ನು ಆಡಿ 1000 ರನ್ ಗಳಿಸಿದ್ದಾರೆ. ಜೊತೆಗೆ 42 ವಿಕೆಟ್ಗಳನ್ನು ಸಹ ಕಬಳಿಸಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಸನ್ ರೈಸರ್ಸ್ ಹೈದರಾಬಾದ್, ಕಿಂಗ್ಸ್ XI ಪಂಜಾಬ್ ಸೇರಿದಂತೆ ಹಲವು ಫ್ರಾಂಚೈಸಿಗಳಿಗಾಗಿ ಆಡಿದ್ದಾರೆ.
ರಹಕೀಮ್ ಕಾರ್ನ್ವಾಲ್: ವೆಸ್ಟ್ ಇಂಡೀಸ್ ಆಟಗಾರರು ಐಪಿಎಲ್ ಜೊತೆ ಉತ್ತಮ ಸಂಪರ್ಕವನ್ನು ಹೊಂದಿದ್ದಾರೆ. ಅದೇ ರೀತಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ರಾಕಿಮ್ ಕಾರ್ನ್ವಾಲ್ ವಿಶ್ವದಾದ್ಯಂತ ಟಿ20 ಲೀಗ್ಗಳಲ್ಲಿ ಕೆಲವು ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದ್ದಾರೆ. ಕಳೆದ ಋತುವಿನಲ್ಲಿ ಸಿಪಿಎಲ್ನಲ್ಲಿ 142.35 ಸ್ಟ್ರೈಕ್ ರೇಟ್ನೊಂದಿಗೆ 26.89 ಸರಾಸರಿಯಲ್ಲಿ 242 ರನ್ ಗಳಿಸಿದ್ದರು. ಟಿ20 ಇನ್ನಿಂಗ್ಸ್ನಲ್ಲಿ 200 ರನ್ ಗಳಿಸಿದ ಏಕೈಕ ಬ್ಯಾಟ್ಸ್ಮನ್ ಕೂಡ. ಆದರೆ ಫಿಟ್ನೆಸ್ ಕಾರಣಗಳು ಮತ್ತು ಅನುಭವದ ಕೊರತೆಯಿಂದಾಗಿ ಫ್ರಾಂಚೈಸಿಗಳು ಇವರನ್ನು ಖರೀದಿಸಲು ಮುಂದಾಗುವುದು ಅನುಮಾನವಾಗಿದೆ.