ಭಾರತ ತಂಡದ ವೇಗಿ ಇಶಾಂತ್ ಶರ್ಮಾ ಅವರ ಲವ್ ಲೈವ್ ಸ್ಟೋರಿ ಸಖತ್ ಇಂಟ್ರಸ್ಟಿಂಗ್ ಆಗಿದೆ. ಒಮ್ಮೆ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಇಶಾಂತ್ ಆಗಮಿಸಿದ್ದರು. ಪಂದ್ಯಾವಳಿಯ ಭಾಗವಾಗಿ, ಅವರು ತಮ್ಮ ಹೃದಯವನ್ನು ಪ್ರತಿಮಾ ಸಿಂಗ್‌ಗೆ ಮೊದಲ ನೋಟದಲ್ಲೇ ನೀಡಿದರು. ಇದಾದ ಬಳಿಕ ಪ್ರತಿದಿನ ಕ್ರೀಡಾಂಗಣಕ್ಕೆ ಬಂದು ದೂರದಿಂದಲೇ ಪ್ರತಿಮಾ ಅವರನ್ನು ನೋಡತೊಡಗಿದರು. ತನ್ನಿಂದಾಗಿಯೇ ಈ ಕ್ರಿಕೆಟ್ ತಾರೆ ಪ್ರತಿದಿನ ಸ್ಟೇಡಿಯಂಗೆ ಬರುತ್ತಿರುವುದು ಪ್ರತಿಮಾಗೆ ತಿಳಿದಿರಲಿಲ್ಲ.
ಇಶಾಂತ್ ಶರ್ಮಾ ಭಾರತಕ್ಕಾಗಿ 105 ಟೆಸ್ಟ್, 80 ODI ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ನವೆಂಬರ್-2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಆಡಿದರು. ಇದಾದ ಬಳಿಕ 34ರ ಹರೆಯದ ಇಶಾಂತ್ ಗೆ ಮತ್ತೆ ಅವಕಾಶ ಸಿಗಲಿಲ್ಲ. ಅವರು ಕೊನೆಯ ಬಾರಿಗೆ 2021 ರಲ್ಲಿ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು.