ಕೆಲವು ಸಮಯದಿಂದ ಎಂಎಸ್ ಧೋನಿ ತಮ್ಮ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ಆಡುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ, ಇದುವರೆಗೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಈ ರೀತಿಯ ಸುದ್ದಿ ಧೋನಿಗೆ ಈ ಬಾರಿಯ ಐಪಿಎಲ್ ಸ್ಪೆಷಲ್ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ಧೋನಿ ಈ ಬಾರಿ ಐದನೇ ಬಾರಿಗೆ ತಮ್ಮ ತಂಡಕ್ಕೆ ಪ್ರಶಸ್ತಿ ನೀಡಲು ಸಿದ್ಧರಾಗಿದ್ದಾರೆ.
4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ 41 ವರ್ಷ. ಇದರೊಂದಿಗೆ ಐಪಿಎಲ್ 2023ರ ಆರಂಭಕ್ಕೂ ಮುನ್ನ ಈ ಋತುವಿನ ನಂತರ ಧೋನಿ ನಿವೃತ್ತಿಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಎಂಎಸ್ ಧೋನಿ ಮೈದಾನದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುತ್ತಿರುವ ರೀತಿ, ವಿಕೆಟ್ ಹಿಂದೆ ನೋಡಿದರೆ ಇನ್ನೂ 2-3 ವರ್ಷ ಆಡಬಹುದು ಎನಿಸುತ್ತದೆ.