IPL History: ಉದ್ಘಾಟನಾ ಪಂದ್ಯದಲ್ಲಿ ಆಡಿದ ಹಾಗೂ ಗೆದ್ದ ತಂಡಗಳು ಯಾವುವು ಗೊತ್ತಾ?
- News18
- |
1/ 10
ಐಪಿಎಲ್ ಮೊದಲ ಆವೃತ್ತಿಯ ಮೊದಲ ಪಂದ್ಯ 2008ರಲ್ಲಿ ಆರ್ಸಿಬಿ ಹಾಗೂ ಕೆಕೆಆರ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಕೆಕೆಆರ್ ತಂ 142 ರನ್ಗಳ ಭರ್ಜರಿ ಜಯ ಸಾಧಿಸಿತ್ತು.
2/ 10
2009 ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ಇದರಲ್ಲಿ ಮುಂಬೈ ತಂಡ 19 ರನ್ಗಳ ಗೆಲುವು ಕಂಡಿತ್ತು.
3/ 10
ಐಪಿಎಲ್ 3ನೇ ಆವೃತ್ತಿಯ 2010 ರಲ್ಲಿ ನಡೆದ ಪಂದ್ಯದಲ್ಲಿ ಡೆಕ್ಕನ್ ಚಾರ್ಜಸ್ ಹಾಗೂ ಚೆನ್ನೈ ತಂಡಗಳು ಮುಖಾಮುಖಿಯಾಗಿ, ಚೆನ್ನೈ 11 ರನ್ಗಳ ಜಯ ಸಾಧಿಸಿತ್ತು.
4/ 10
2011ರ ಐಪಿಎಲ್ನಲ್ಲಿ ಮೊದಲ ಪಂದ್ಯ ಚೆನ್ನೈ ಹಾಗೂ ಕೆಕೆಆರ್ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ಚೆನ್ನೈ 2 ರನ್ಗಳ ರೋಚಕ ಗೆಲುವು ತನ್ನದಾಗಿಸಿತು.
5/ 10
2013ರ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳು ಸೆಣೆಸಾಟ ನಡೆಸಿ, ಕೊನೆಗೆ ಕೆಕೆಆರ್ 6 ವಿಕೆಟ್ಗಳಿಂದ ಗೆದ್ದು ಬೀಗಿತು.
6/ 10
2014 ಐಪಿಎಲ್ ಸೀಸನ್ನ ಮೊದಲ ಪಂದ್ಯ ಕೆಕೆಆರ್ ಹಾಗೂ ಮುಂಬೈ ತಂಡಗಳ ನಡುವೆ ನಡೆದು, ಕೆಕೆಆರ್ 41 ರನ್ಗಳ ಗೆಲುವು ಸಾಧಿಸಿತ್ತು.
7/ 10
ಅಂತೆಯೆ 2015 ಸೀನನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿತ್ತು.
8/ 10
2016 ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ರೈಸಿಂಗ್ ಪುಣೆ ಹಾಗೂ ಮುಂಬೈ ತಂಡಗಳು ಸೆಣೆಸಾಟ ನಡೆಸಿ, ಪುಣೆ 9 ವಿಕೆಟ್ಗಳ ಭರ್ಜರಿ ಗೆಲುವು ಕಂಡಿತು.
9/ 10
2017ರ ಐಪಿಎಲ್ನಲ್ಲಿ ಮೊದಲ ಪಂದ್ಯ ಸನ್ರೈಸರ್ಸ್ ಹೈದರಾಬಾದ್ ಹಾಗೂ ಆರ್ಸಿಬಿ ನಡುವೆ ನಡೆದು, ಹೈದರಾಬಾದ್ 35 ರನ್ಗಳಿಂದ ಗೆದ್ದು ಬೀಗಿತ್ತು.
10/ 10
ಕಳೆದ 2018ರ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಸಿಎಸ್ಕೆ ತಂಡ 1 ವಿಕೆಟ್ಗಳ ರೋಚಕ ಗೆಲುವು ತನ್ನದಾಗಿಸಿತು.
First published: