ಇದರ ನಡುವೆ ಫ್ರಾಂಚೈಸಿ ಆಸಕ್ತಿ ತೋರಿಸದ ಕೆಲವು ಆಟಗಾರರು ಇದ್ದಾರೆ. ಅವರಲ್ಲಿ ಮೊದಲ ದೊಡ್ಡ ಹೆಸರು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಲಿನ್. ಐಪಿಎಲ್ನಲ್ಲಿ ಹಲವು ಫ್ರಾಂಚೈಸಿಗಳಿಗಾಗಿ ಕಾಣಿಸಿಕೊಂಡಿರುವ ಲಿನ್ಗೆ ಈ ಬಾರಿ ಯಾವುದೇ ಖರೀದಿದಾರರು ಸಿಗಲಿಲ್ಲ. ಐಪಿಎಲ್ನಲ್ಲಿ 42 ಪಂದ್ಯಗಳನ್ನು ಆಡಿರುವ ಅವರು 42 ಇನ್ನಿಂಗ್ಸ್ಗಳಲ್ಲಿ 34.08 ಸರಾಸರಿಯಲ್ಲಿ 1329 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಅವರ ಸ್ಟ್ರೈಕ್ ರೇಟ್ 140.63 ಆಗಿದೆ.
ಮಾರಾಟವಾಗದ ದೊಡ್ಡ ಆಟಗಾರರ ಪಟ್ಟಿಯಲ್ಲಿ ಎರಡನೇ ದೊಡ್ಡ ಹೆಸರು ಇಂಗ್ಲೆಂಡ್ ಬ್ಯಾಟ್ಸ್ಮನ್ ಡೇವಿಡ್ ಮಲಾನ್. ಮಲಾನ್ ಈ ವರ್ಷ ಯಾವುದೇ ಖರೀದಿದಾರರನ್ನು ಕಂಡುಕೊಂಡಿಲ್ಲ. ಇಂಗ್ಲೆಂಡ್ ಪರ 55 ಟಿ20 ಪಂದ್ಯಗಳನ್ನು ಆಡಿರುವ ಅವರು 53 ಇನ್ನಿಂಗ್ಸ್ಗಳಲ್ಲಿ 38.84 ಸರಾಸರಿಯಲ್ಲಿ 1748 ರನ್ ಗಳಿಸಿದ್ದಾರೆ. ಅವರು ಟಿ20 ಕ್ರಿಕೆಟ್ನಲ್ಲಿ ಒಂದು ಶತಕ ಮತ್ತು 14 ಅರ್ಧಶತಕಗಳನ್ನು ಸಿಡಿಸಿದ್ದಾರೆ.