ವಿಶೇಷ ಎಂದರೇ, ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಆವೃತ್ತಿಯಲ್ಲೇ ಚಾಂಪಿನ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮುಂಬರುವ ಆವೃತ್ತಿಯಲ್ಲಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕೆ ಇಳಿಯಲು ಸಿದ್ಧವಾಗಿದೆ. ಟೈಟಲ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಟೈಟಾನ್ಸ್, 2023ರ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಆಟಗಾರರನ್ನು ಖರೀದಿ ಮಾಡಿದೆ. ಮಿನಿ ಹರಾಜಿನಲ್ಲಿ 19.25 ಕೋಟಿ ರೂಪಾಯಿ ಹಣ ಹೊಂದಿತ್ತು.
ಮೊದಲು ಸನ್ರೈಸರ್ಸ್ ತಂಡದ ನಾಯಕರಾಗಿದ್ದ, ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್ ಆಲ್ರೌಂಡರ್ ಒಡಿಯನ್ ಸ್ಮಿತ್ ಖರೀದಿ ಮಾಡಿದೆ. ಉಳಿದಂತೆ ಬ್ಯಾಕ್ಅಪ್ ವಿಕೆಟ್ ಕೀಪರ್ ಆಗಿ ಕೆಎಸ್ ಭರತ್, ಯುವ ಆಟಗಾರ ಶಿವಂ ಮಾವಿ ಅವರನ್ನು ಖರೀದಿ ಮಾಡಿ ಟೈಟಾನ್ಸ್ ತಂಡವನ್ನು ಬ್ಯಾಲೆನ್ಸ್ ಮಾಡಿದೆ. ಹಲವು ಆಟಗಾರರನ್ನು ರಿಟೈನ್ ಮಾಡಿಕೊಂಡು, ಕೇವಲ 6 ಮಂದಿ ಆಟಗಾರರನ್ನು ಮಾತ್ರ ರಿಲೀಸ್ ಮಾಡಿತ್ತು.
ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರನ್ನು 2 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ಖರೀದಿ ಮಾಡಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ 16 ಕೋಟಿ ರೂಪಾಯಿಗೆ ಮಿಲಿಯಮ್ಸನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ರಿಟೈನ್ ಮಾಡಿಕೊಟ್ಟಿತ್ತು. ಆದರೆ ಕಳೆದ ವರ್ಷ ಹೇಳಿಕೊಳ್ಳುವಂತ ಪ್ರದರ್ಶನ ಅವರಿಂದ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂಡದ ಕ್ಯಾಪ್ಟನ್ ಆಗಿದ್ದ ವಿಲಿಯಮ್ಸನ್ ಅವರನ್ನೇ ಹೈದರಾಬಾದ್ ತಂಟ ರಿಲೀಸ್ ಮಾಡಿತ್ತು.
ಉಳಿದಂತೆ ಕೊಚ್ಚಿಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡ ಬಲಿಷ್ಠ ತಂಡವನ್ನು ಕಟ್ಟಿದೆ. ಉತ್ತರ ಪ್ರದೇಶ ಮೂಲದ ವೇಗಿ ಶಿವಂ ಮಾವಿಗೆ 6 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿರುವ ಟೈಟಾನ್ಸ್, ಮಿನಿ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತವನ್ನು ನೀಡಿದೆ. ಉಳಿದಂತೆ ಜೋಶ್ ಲಿಟಲ್ಗೆ 4.4 ಕೋಟಿ ರೂಪಾಯಿ, ಕೇನ್ ವಿಲಿಯಮ್ಸನ್ಗೆ 2 ಕೋಟಿ ರೂಪಾಯಿ, ಕೆಎಸ್ ಭರತ್ಗೆ 1.20 ಕೋಟಿ ರೂಪಾಯಿ, ಓಡಿನ್ ಸ್ಮಿತ್ಗೆ 50 ಲಕ್ಷ ರೂಪಾಯಿ, ಮೋಹಿತ್ ಶರ್ಮಾಗೆ 50 ಲಕ್ಷ ರೂಪಾಯಿ ಹಾಗೂ ಉರ್ವಿಲ್ ಪಟೇಲ್ಗೆ 20 ಲಕ್ಷ ರೂಪಾಯಿಯನ್ನು ನೀಡಿ ಖರೀದಿ ಮಾಡಿದೆ.
ಗುಜರಾತ್ ಟೈಟಾನ್ಸ್ ಸಂಪೂರ್ಣ ತಂಡ ಆಟಗಾರರು: ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ಮೊಹಮ್ಮದ್ ಶಮಿ ಮತ್ತು ನೂರ್ ಅಹಮದ್, ಶಿವಂ ಮಾವಿ, ಜೋಶ್ ಲಿಟಲ್, ಕೇನ್ ವಿಲಿಯಮ್ಸನ್, ಕೆಎಸ್ ಭರತ್, ಓಡಿನ್ ಸ್ಮಿತ್, ಮೋಹಿತ್ ಶರ್ಮಾ, ಉರ್ವಿಲ್ ಪಟೇಲ್.