IPL 2023 Remaining Purse: ಯಾವ ತಂಡದ ಪರ್ಸ್ನಲ್ಲಿ ಎಷ್ಟು ಕೋಟಿ ಉಳಿದಿದೆ? ಇನ್ನೆಷ್ಟು ಪ್ಲೇಯರ್ಸ್ಗಳನ್ನು ಖರೀದಿಸಬಹುದು? ಇಲ್ಲಿದೆ ವಿವರ
IPL 2023 Remaining Purse: ಐಪಿಎಲ್ ಹರಾಜಿನ ಪ್ರಕ್ರಿಯೆಯು ಕೊಚ್ಚಿಯ ಗ್ರ್ಯಾಂಡ್ ಹಯಾಟ್ ಹೋಟೆಲ್ನಲ್ಲಿ ಪೂರ್ಣಗೊಂಡಿತು. ಐಪಿಎಲ್ 16ನೇ ಸೀಸನ್ ಮಾರ್ಚ್ 2023ರ ಕೊನೆಯ ವಾರದಿಂದ ಪ್ರಾರಂಭವಾಗಬಹುದು. ಇದಕ್ಕೂ ಮುನ್ನ ಹರಾಜಿನ ಬಳಿಕ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಎಂದು ನೋಡೋಣ ಬನ್ನಿ.
IPL 2023 ರ ಹರಾಜು ಪ್ರಕ್ರಿಯೆಯು ಈಗ ಪೂರ್ಣಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಖರೀದಿಸಿದೆ. ಈ ಋತುವಿನಲ್ಲಿ ಜಿಂಬಾಬ್ವೆ, ನಮೀಬಿಯಾ ಮತ್ತು ಐರ್ಲೆಂಡ್ನ ಕ್ರಿಕೆಟಿಗರು ಕೂಡ ಐಪಿಎಲ್ನಲ್ಲಿ ಸ್ಥಾನ ಪಡೆದಿದ್ದಾರೆ.
2/ 8
ಸ್ಯಾಮ್ ಕರೆನ್ ಈ ಋತುವಿನಲ್ಲಿ ಮಾತ್ರವಲ್ಲದೆ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರರಾದರು. ಪಂಜಾಬ್ ಕಿಂಗ್ಸ್ 18.50 ಕೋಟಿಗಳ ದೊಡ್ಡ ಬಿಡ್ ಮಾಡುವ ಮೂಲಕ ಕರೆನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು.
3/ 8
ಐಪಿಎಲ್ ಹರಾಜಿನಲ್ಲಿ ಯಾವ ತಂಡ ಹೆಚ್ಚು ಹಣ ಖರ್ಚು ಮಾಡಿದೆ ಮತ್ತು ಯಾವ ಫ್ರಾಂಚೈಸಿ ಕಡಿಮೆ ಹಣ ಖರ್ಚು ಮಾಡಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಅಂತಹ ತಂಡಗಳ ಬಗ್ಗೆ ನಾವು ನಿಮಗೆ ಹೇಳೋಣ.
4/ 8
ಎಂಟು ವಿದೇಶಿ ಆಟಗಾರರು ಸೇರಿದಂತೆ ಒಟ್ಟು 25 ಆಟಗಾರರನ್ನು ಖರೀದಿಸಲು ಎಲ್ಲಾ ತಂಡಗಳಿಗೆ ಅವಕಾಶ ನೀಡಲಾಗಿತ್ತು. ಸನ್ ರೈಸರ್ಸ್ ಹೈದರಾಬಾದ್ ತಂಡ ಅತಿ ದೊಡ್ಡ ಮೊತ್ತದೊಂದಿಗೆ ಐಪಿಎಲ್ ಹರಾಜಿಗೆ ಪ್ರವೇಶಿಸಿತ್ತು. ಎಲ್ಲಾ ಸ್ಲಾಟ್ಗಳನ್ನು ಭರ್ತಿ ಮಾಡಿದರೂ ಕಾವ್ಯಾ ಮಾರನ್ ತಂಡ 6.55 ಕೋಟಿ ರೂಪಾಯಿ ಉಳಿಸುವಲ್ಲಿ ಯಶಸ್ವಿಯಾಗಿದೆ.
5/ 8
ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಹರಾಜಿನ ನಂತರ ಅತ್ಯಧಿಕ ಮೊತ್ತದ 12.20 ಕೋಟಿಗಳನ್ನು ಉಳಿಸಿಕೊಂಡಿದೆ. ಆದರೆ, ಈ ಅವಧಿಯಲ್ಲಿ ಅವರು ಏಳು ವಿದೇಶಿ ಆಟಗಾರರು ಸೇರಿದಂತೆ 22 ಆಟಗಾರರನ್ನು ಮಾತ್ರ ಖರೀದಿಸಿದ್ದಾರೆ. ಈ ತಂಡ ನಾಲ್ಕು ಆಟಗಾರರನ್ನು ನಿಗದಿತ ಮಿತಿಗಿಂತ ಕಡಿಮೆ ಖರೀದಿಸಿದೆ.
6/ 8
ದೆಹಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಎರಡೂ ತಂಡಗಳು ಹರಾಜಿನ ನಂತರ ತಮ್ಮ ಪರ್ಸ್ನಲ್ಲಿ 4.45 ಕೋಟಿ ಉಳಿಸಿಕೊಂಡಿದೆ. ಎರಡೂ ಫ್ರಾಂಚೈಸಿಗಳು ತಮ್ಮ ಎಲ್ಲಾ ಸ್ಲಾಟ್ಗಳನ್ನು ಪೂರ್ಣಗೊಳಿಸಿವೆ. ದೆಹಲಿ ಮುಖೇಶ್ ಕುಮಾರ್ಗೆ ಗರಿಷ್ಠ 5.50 ಕೋಟಿ ಖರ್ಚು ಮಾಡಿದೆ. ಶಿವಂ ಮಾವಿಯ ಮೇಲೆ ಗುಜರಾತ್ ಅತಿ ಹೆಚ್ಚು 6 ಕೋಟಿ ಬಿಡ್ ಮಾಡಿದೆ.
7/ 8
ಹರಾಜಿನ ನಂತರ ಲಕ್ನೋ ಸೂಪರ್ ಜೈಂಟ್ಸ್ ಬಳಿ 3.55 ಕೋಟಿ ಉಳಿದಿದೆ. ಎಲ್ಲಾ ಸ್ಲಾಟ್ಗಳನ್ನು ಭರ್ತಿ ಮಾಡಿದ ನಂತರ ಚೆನ್ನೈ 1.5 ಕೋಟಿ ರೂಪಾಯಿಗಳನ್ನು ಉಳಿಸಿದೆ. ಬೆಂಗಳೂರಿನ ಬಳಿ 1.75 ಕೋಟಿ ಉಳಿದಿದೆ.
8/ 8
ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಹೆಚ್ಚು ಹಣ ಖರ್ಚು ಮಾಡುವ ಫ್ರಾಂಚೈಸಿಯಾಗಿದೆ. ಹರಾಜು ಮುಗಿದ ನಂತರ ಮುಂಬೈ ಬಳಿ ಉಳಿದಿರುವುದು ಐದು ಲಕ್ಷ ರೂಪಾಯಿ ಮಾತ್ರ. ವಿಶೇಷವೆಂದರೆ ಇನ್ನೂ ಈ ತಂಡವು ತನ್ನ ಎಲ್ಲಾ 25 ಸ್ಲಾಟ್ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಮುಂಬೈ ಕೇವಲ 24 ಕ್ರಿಕೆಟಿಗರೊಂದಿಗೆ ಹರಾಜನ್ನು ಕೊನೆಗೊಳಿಸಿತು.