SRH ಮುಂದಿನ ನಾಯಕ ಯಾರು? ಕ್ಯಾಪ್ಟನ್ ರೇಸ್ನಲ್ಲಿದ್ದಾರೆ ಟೀಂ ಇಂಡಿಯಾ ಸ್ಟಾರ್ ಬೌಲರ್
IPL 2023 Mini Auction: ಐಪಿಎಲ್ 2023ಗೆ ಮಿನಿ ಹರಾಜು ಡಿಸೆಂಬರ್ 23 ರಂದು ನಡೆಯಲಿದೆ. ಮೆಗಾ ಹರಾಜಿನಲ್ಲಿ ಖರೀದಿಸಿದ ಆಟಗಾರರು ತಂಡಕ್ಕೆ ಹೊರೆಯಾದರೆ ಅವರನ್ನು ಬಿಡುಗಡೆ ಮಾಡುವ ಆಯ್ಕೆಯನ್ನು ಫ್ರಾಂಚೈಸಿಗಳಿಗೆ ಬಿಸಿಸಿಐ ನೀಡಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023ರ ಬಿಸಿ ಇದೀಗ ಪ್ರಾರಂಭವಾಗಿದೆ. ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಆರಂಭವಾಗಲಿರುವ ಧನಾಧನ್ ಲೀಗ್ ತನ್ನ ಮೊದಲ ಹೆಜ್ಜೆ ಇಟ್ಟಿದೆ. ಈ ವರ್ಷದ ಆರಂಭದಲ್ಲಿ ಮೆಗಾ ಹರಾಜು ನಡೆದಿದ್ದು ಗೊತ್ತೇ ಇದೆ.
2/ 8
ಐಪಿಎಲ್ 2023ಗಾಗಿ ಮಿನಿ ಹರಾಜು ಡಿಸೆಂಬರ್ 23 ರಂದು ನಡೆಯಲಿದೆ. ಮೆಗಾ ಹರಾಜಿನಲ್ಲಿ ಖರೀದಿಸಿದ ಆಟಗಾರರು ತಂಡಕ್ಕೆ ಹೊರೆಯಾದರೆ ಅವರನ್ನು ಬಿಡುಗಡೆ ಮಾಡುವ ಆಯ್ಕೆಯನ್ನು ಫ್ರಾಂಚೈಸಿಗಳಿಗೆ ಬಿಸಿಸಿಐ ನೀಡಿದೆ.
3/ 8
ಇನ್ನು, ಕೆಕೆಆರ್ ಅತಿ ಹೆಚ್ಚು ಆಟಗಾರರನ್ನು ಬಿಡುಗಡೆ ಮಾಡಿದರೆ, ಸನ್ ರೈಸರ್ಸ್ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. 12 ಮಂದಿಯನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗಿದೆ.
4/ 8
ಸನ್ರೈಸರ್ಸ್ ಹೂದರಾಬಾದ್ ತಮಡವು ಈ ಬಾರಿ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿದೆ. ಇದರಿಂದಾಗಿ ಸನ್ರೈಸರ್ಸ್ನ ಮುಂದಿನ ನಾಯಕ ಯಾರು ಎಂಬ ಪ್ರಶ್ನೆ ಇದೀಗ ಎಲ್ಲರನ್ನು ಕಾಡುತ್ತಿದೆ.
5/ 8
ಡಿಸೆಂಬರ್ 23 ರಂದು ಮಿನಿ ಹರಾಜು ನಡೆಯಲಿದೆ. ಅದರಲ್ಲಿ ಪ್ರತಿ ತಂಡವು ಮತ್ತೊಮ್ಮೆ ಆಟಗಾರರನ್ನು ಖರೀದಿಸಬೇಕಾಗುತ್ತದೆ. ಇದರ ನಂತರ SRH ಮುಂದಿನ ನಾಯಕ ಯಾರು ಎಂಬುದು ಬಹುತೇಕ ಖಚಿತವಾಗಲಿದೆ.
6/ 8
ಆದರೆ ನಾಯಕತ್ವದ ರೇಸ್ ನಲ್ಲಿ ಮೂರು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಇದರಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಮಾರ್ಕ್ರಾಮ್ ಹೆಸರು ಪ್ರಮುಖವಾಗಿದೆ.
7/ 8
ಇವರಿಗೆ ಸನ್ ರೈಸರ್ಸ್ ತಂಡದ ಸಾರಥ್ಯವನ್ನು ಹಸ್ತಾಂತರಿಸಲು ಸನ್ ರೈಸರ್ಸ್ ಮುಂದಾಗಿದೆ ಎಂದು ವರದಿಯಾಗಿದೆ. ಮಾರ್ಕರಮ್ ಜೊತೆಗೆ ರಾಹುಲ್ ತ್ರಿಪಾಠಿ ಮತ್ತು ಭುವನೇಶ್ವರ್ ಕುಮಾರ್ ಕೂಡ ನಾಯಕತ್ವದ ರೇಸ್ನಲ್ಲಿದ್ದಾರೆ.
8/ 8
ಮಿನಿ ಹರಾಜಿನಲ್ಲಿ ಬೆನ್ ಸ್ಟೋಕ್ಸ್ ರೂಪದಲ್ಲಿ ಪ್ರಮುಖ ಆಟಗಾರ ಲಭ್ಯರಾಗಲಿದ್ದಾರೆ. ಅವರನ್ನು ಸನ್ ರೈಸರ್ಸ್ ಖರೀದಿಸಿ ನಾಯಕತ್ವದ ಜವಾಬ್ದಾರಿ ನೀಡಿದರೆ ಆಶ್ಚರ್ಯವಿಲ್ಲ.