ಕೊನೆಯ ಓವರ್ ನಲ್ಲಿ ಯಶ್ ದಯಾಲ್ ಬೌಲಿಂಗ್ ಮಾಡಿದರು. ಉಮೇಶ್ ಯಾದವ್ ಮೊದಲ ಎಸೆತದಲ್ಲಿ ಸಿಂಗಲ್ ರನ್ ಗಳಿಸಿ ರಿಂಕು ಸಿಂಗ್ ಗೆ ಸ್ಟ್ರೈಕ್ ನೀಡಿದರು. ರಿಂಕು ಸಿಂಗ್ ಮುಂದಿನ ಐದು ಎಸೆತಗಳಲ್ಲಿ 6, 6, 6, 6, 6 ರನ್ ಗಳಿಸಿದರು. ಸೋಲುತ್ತಿದ್ದ ಪಂದ್ಯದಲ್ಲಿ ಕೆಕೆಆರ್ ಭರ್ಜರಿ ಗೆಲುವು ಸಾಧಿಸಿತ್ತು. ಅಲ್ಲಿಯವರೆಗೂ ಗೆಲುವಿನ ವಿಶ್ವಾಸದಲ್ಲಿದ್ದ ಗುಜರಾತ್ ಟೈಟಾನ್ಸ್ ಏಕಾಏಕಿ ಸೋತಿತು. ರಿಂಕು ಸಿಂಗ್ 21 ಎಸೆತಗಳಲ್ಲಿ ಔಟಾಗದೆ 48 ರನ್ ಗಳಿಸಿ ಕೆಕೆಆರ್ ಗೆ ಸೂಪರ್ ಗೆಲುವು ತಂದುಕೊಟ್ಟರು.