ಆದರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಸ್ವಲ್ಪ ವಿಭಿನ್ನವಾಗಿರುತ್ತದೆ. ಟಾಸ್ ಸಮಯದಲ್ಲಿ, ಎರಡೂ ತಂಡಗಳು ತಮ್ಮ 11 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸುತ್ತವೆ ಮತ್ತು ಅಂಪೈರ್‌ಗಳಿಗೆ 4 ಹೆಚ್ಚಿನ ಆಟಗಾರರ ಪಟ್ಟಿಯನ್ನು ನೀಡಬೇಕಾಗುತ್ತದೆ. ಎರಡೂ ತಂಡಗಳು ತಮ್ಮ ಇಂಪ್ಯಾಕ್ಟ್ ಪ್ಲೇಯರ್ ಪಟ್ಟಿಯಿಂದ ಒಬ್ಬ ಆಟಗಾರನನ್ನು ಅಂತಿಮ ತಂಡದಲ್ಲಿ ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿವೆ. ಬ್ಯಾಟಿಂಗ್ ಜೊತೆಗೆ, ಆಟಗಾರನು ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ.
ಈ ಇಂಪ್ಯಾಕ್ಟ್ ಪ್ಲೇಯರ್ ಅನ್ನು 15 ರಿಂದ 20 ಓವರ್‌ಗಳ ನಡುವೆ ತೆಗೆದುಕೊಳ್ಳಲಾಗುವುದಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಅನ್ನು ಬಳಸುವಾಗ, ನಾಯಕನು ಫೀಲ್ಡ್ ಅಂಪೈರ್ ಅಥವಾ ನಾಲ್ಕನೇ ಅಂಪೈರ್‌ನೊಂದಿಗೆ ಮಾತನಾಡಬೇಕು. ಇದರ ಪರಿಣಾಮ ಒಮ್ಮೆ ನಿರ್ಗಮಿಸಿದ ಆಟಗಾರನಿಗೆ ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ಇಂಪ್ಟಕ್ಟ್ ಪ್ಲೇಯರ್ಗೆ ಸಂಪೂರ್ಣವಾಗಿ ಬೌಲ್ ಮಾಡಲು ಮತ್ತು ಬ್ಯಾಟಿಂಗ್ ಮಾಡಲು ಅವಕಾಶವಿರುತ್ತದೆ.