IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

Virender Sehwag - Shubman Gill: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಶುಭಮನ್ ಗಿಲ್ ಅವರ ಪ್ರದರ್ಶನವನ್ನು ಕಂಡು ಕೋಪಗೊಂಡಿದ್ದಾರೆ.

First published:

  • 18

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಐಪಿಎಲ್ 2023ರ 17ನೇ ಪಂದ್ಯ ಗುರುವಾರ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗುಜರಾತ್ 6 ವಿಕೆಟ್‌ಗಳ ಜಯ ಸಾಧಿಸುವಲ್ಲಿ ಶುಭಮನ್ ಗಿಲ್ ಅವರ ಅರ್ಧಶತಕ ಪ್ರಮುಖ ಪಾತ್ರ ವಹಿಸಿತು.

    MORE
    GALLERIES

  • 28

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಈಗಾಗಲೇ ಶುಭ್​ಮನ್ ಗಿಲ್​ ಅವರನ್ನು ಜೂನಿಯರ್​ ವಿರಾಟ್ ಕೊಹ್ಲಿ ಎಂದು ಬಿಂಬಿಸಲಾಗುತ್ತಿದೆ. ಅದೇ ರೀತಿ ಗಿಲ್​ ಸಹ ಉತ್ತಮವಾಗಿ ಆಡುತ್ತಿದ್ದು, ಟೀಂ ಇಂಡಿಯಾ ಪರ ಮಾತ್ರವಲ್ಲದೇ ಐಪಿಎಲ್​ನಲ್ಲಿಯೂ ಗುಜರಾತ್​ ಟೈಟನ್ಸ್ ಪರ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸುತ್ತಿದ್ದಾರೆ.

    MORE
    GALLERIES

  • 38

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಆದರೆ ಇದರ ಹೊರತಾಗಿಯೂ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪಂದ್ಯದಲ್ಲಿ ಶುಭಮನ್ ಗಿಲ್ ಅವರ ಪ್ರದರ್ಶನವನ್ನು ಕಂಡು ಕೋಪಗೊಂಡಿದ್ದಾರೆ.

    MORE
    GALLERIES

  • 48

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ಮೊದಲು ಬ್ಯಾಟಿಂಗ್ ಮಾಡಿ ಗುಜರಾತ್ ಎದುರು ಗೆಲುವಿಗೆ 154 ರನ್‌ಗಳ ಸವಾಲನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಯುವ ಕ್ರಿಕೆಟಿಗ ಶುಭಮನ್ ಗಿಲ್ ಆರಂಭದಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು.

    MORE
    GALLERIES

  • 58

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಅವರು 49 ಎಸೆತಗಳಲ್ಲಿ 67 ರನ್ ಗಳಿಸಿದರು ಆದರೆ ಅವರ ನಿಧಾನಗತಿಯ ಬ್ಯಾಟಿಂಗ್ ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ಯಿತು. ಈ ಕಾರಣಕ್ಕಾಗಿಯೇ ವೀರೇಂದ್ರ ಸೆಹ್ವಾಗ್ ಗಿಲ್ ವಿರುದ್ಧ ಸಿಟ್ಟಾಗಿದ್ದಾರೆ.

    MORE
    GALLERIES

  • 68

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಈ ಕುರಿತು ಮಾತನಾಡಿರುವ ಸೆಹ್ವಾಗ್, ಶುಭ್​ಮನ್ ಗಿಲ್ ಅವರ ಅರ್ಧಶತಕಕ್ಕಾಗಿ ಆಡದಿದ್ದರೆ, ಪಂದ್ಯವು ಬೇಗನೆ ಮುಗಿಯುತ್ತಿತ್ತು. ಅವರು ಪವರ್‌ಪ್ಲೇನಲ್ಲಿ 9 ಎಸೆತಗಳಲ್ಲಿ 17 ರನ್ ಗಳಿಸಿದರು.

    MORE
    GALLERIES

  • 78

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಶುಭ್​ಮನ್ ಗಿಲ್ 49 ಎಸೆತಗಳಲ್ಲಿ 67 ರನ್ ಗಳಿಸಿದರು. ಆದರೆ ಅವರು ತಮ್ಮ ವೈಯಕ್ತಿಕ ಅರ್ಧಶತಕವನ್ನು 41 ಅಥವಾ 42 ಎಸೆತಗಳಲ್ಲಿ ಪೂರ್ಣಗೊಳಿಸಿದರು. ಅವರ ಅರ್ಧಶತಕದ ನಂತರ ಅವರು ವೇಗವಾಗಿ ಆಡಲು ಪ್ರಾರಂಭಿಸಿದರು.

    MORE
    GALLERIES

  • 88

    IPL 2023: ಶುಭ್​ಮನ್​ ಗಿಲ್​ ಬಗ್ಗೆ ಸಿಟ್ಟಾದ ಸೆಹ್ವಾಗ್, ತುಂಬಾ ದಿನ ಉಳಿಯಲ್ಲ ಎಂದ ವೀರು

    ಅದು ಇಲ್ಲದಿದ್ದರೆ, ಗುಜರಾತ್  17 ಅಥವಾ 18ನೇ ಓವರ್​ನಲ್ಲಿ ಗೆಲ್ಲುತ್ತಿತ್ತು. ಆಟಗಾರನೊಬ್ಬ ತಂಡಕ್ಕಿಂತ ವೈಯಕ್ತಿಕ ದಾಖಲೆಗಳಿಗಾಗಿ ಆಟವಾಡಬಾರದು. ಇದರಿಂದ ಭವಿಷ್ಯದಲ್ಲಿ ಅವರನ್ನು ತಂಡದಿಂದ ಬೇಗ ಕೈಬಿಡುವ ಸಾಧ್ಯತೆ ಇರುತ್ತದೆ. ಯುವ ಆಟಗಾರರು ಸರಿಯಾದ ಸಮಯದಲ್ಲಿ ಅದರ ಬಗ್ಗೆ ಯೋಚಿಸಬೇಕು ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    MORE
    GALLERIES