ಇಂಡಿಯನ್ ಪ್ರೀಮಿಯರ್ ಲೀಗ್ 2021 ರ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಆರ್‌ಸಿಬಿ ತಂಡವು 2017 ರಲ್ಲಿ ಮತ್ತು 2019 ರಲ್ಲಿ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಭಾರತೀಯ T20 ತಂಡದ ನಾಯಕತ್ವವನ್ನು ತೊರೆದ ನಂತರ, ಕೊಹ್ಲಿ 2021 ರ ಋತುವಿನಲ್ಲಿ RCB ನಾಯಕತ್ವವನ್ನು ಸಹ ತೊರೆದರು.
ಹೌದು, ನಾಯಕತ್ವದ ಕುರಿತು ಮಾತನಾಡಿರುವ ಕೊಹ್ಲಿ, ‘ನನ್ನ ನಾಯಕತ್ವದ ಅವಧಿ ಮುಗಿಯುವ ಸಮಯದಲ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ. ಅದರ ಬಗ್ಗೆ ನನ್ನಲ್ಲಿ ಯಾವ ಭಾವನೆಯೂ ಉಳಿದಿರಲಿಲ್ಲ. ಅದು ನನ್ನ ಸ್ವಂತ ದೃಷ್ಟಿಕೋನವಾಗಿದ್ದರೂ, ಒಬ್ಬ ವ್ಯಕ್ತಿಯಾಗಿ ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ ಮತ್ತು ಅದನ್ನು ಇನ್ನು ಮುಂದೆ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ನಾನು ನಾಯಕತ್ವದಿಂದ ಕೆಳಗಿಳಿದೆ ಎಂದಿದ್ದಾರೆ.