ಐಪಿಎಲ್ 2023ರಲ್ಲಿ 8 ಪಂದ್ಯಗಳನ್ನಾಡಿರುವ ಕೊಹ್ಲಿ 5 ಅರ್ಧಶತಕಗಳ ನೆರವಿನಿಂದ 333 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿಗಿಂತ ಮೊದಲು ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಒಂದೇ ಮೈದಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದರು. ಮೀರ್‌ಪುರದ ಶೇರ್ ಬಾಂಗ್ಲಾದೇಶ ಸ್ಟೇಡಿಯಂನಲ್ಲಿ 129 ಪಂದ್ಯಗಳಲ್ಲಿ 121 ಇನ್ನಿಂಗ್ಸ್‌ಗಳಲ್ಲಿ 18 ಅರ್ಧಶತಕಗಳೊಂದಿಗೆ 2989 ರನ್ ಗಳಿಸಿದ್ದರು.
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ. ಅವರು 7000 ರನ್‌ಗಳಿಗೆ ಕೇವಲ 43 ರನ್‌ಗಳ ಅಂತರದಲ್ಲಿದ್ದಾರೆ. ಅವರು ಇದುವರೆಗೆ 231 ಪಂದ್ಯಗಳಲ್ಲಿ 37ರ ಸರಾಸರಿಯಲ್ಲಿ 6957 ರನ್ ಗಳಿಸಿದ್ದಾರೆ. ಅವರು 5 ಶತಕ ಮತ್ತು 49 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರು 600 ಕ್ಕೂ ಹೆಚ್ಚು ಬೌಂಡರಿಗಳನ್ನು ಮತ್ತು 200 ಕ್ಕೂ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ್ದಾರೆ.