ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2008ರಲ್ಲಿ ಪ್ರಾರಂಭವಾಯಿತು. ಐಪಿಎಲ್ ಆರಂಭವಾದಾಗಿನಿಂದಲೂ ಅಭಿಮಾನಿಗಳಿಗೆ ಮೋಜು ಮತ್ತು ಕಿಕ್ ನೀಡುತ್ತಿದೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿಸ್ಪರ್ಧಿಯಾಗಿದ್ದ ಆಟಗಾರರು ಐಪಿಎಲ್ ಮೂಲಕ ಉತ್ತಮ ಸ್ನೇಹಿತರಾದರು. ಇದರೊಂದಿಗೆ ಐಪಿಎಲ್ನಲ್ಲಿ ಹಲವು ಭಾರತೀಯ ಮತ್ತು ವಿದೇಶಿ ಆಟಗಾರರ ಪ್ರೇಮಕಥೆ ಅರಳಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ ಸಮಯದಲ್ಲಿ ಪ್ರೀತಿ ಪ್ರಪೋಸ್ ಮಾಡಿದ ಆಟಗಾರರನ್ನು ಯಾರೆಲ್ಲಾ ಇದ್ದಾರೆ ನೋಡೋಣ.
ದೀಪಕ್ ಚಹಾರ್: ಈ ಪಟ್ಟಿಯಲ್ಲಿ ಮೊದಲ ಹೆಸರು ದೀಪಕ್ ಚಹಾರ್. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ದೀಪಕ್ ಚಹಾರ್, ಐಪಿಎಲ್ ಸೀಸನ್ 2021ರ ಪಂದ್ಯದಲ್ಲಿ ತನ್ನ ಗೆಳತಿ ಜಯ ಭಾರದ್ವಾಜ್ಗೆ ಪ್ರಪೋಸ್ ಮಾಡಿದ್ದರು. ಸ್ಟೇಡಿಯಂನಲ್ಲಿ ಎಲ್ಲರ ಮುಂದೆ ಮೊಣಕಾಲೂರಿ ಪ್ರಪೋಸ್ ಮಾಡಿದರು. ಮಹೇಂದ್ರ ಸಿಂಗ್ ಧೋನಿ ದೀಪಕ್ ಚಹಾರ್ ಅವರಿಗೆ ಸ್ಟೇಡಿಯಂನಲ್ಲಿ ಪ್ರಸ್ತಾಪಿಸಲು ಐಡಿಯಾ ನೀಡಿದ್ದರು. ದೀಪಕ್ 2021ರಲ್ಲಿ ಪ್ರಪೋಸ್ ಮಾಡಿ ನಂತರ ಮದುವೆಯಾದರು.
ಎಬಿ ಡಿವಿಲಿಯರ್ಸ್: ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಮಿಸ್ಟರ್ 360 ಆಟಗಾರ ಎಬಿ ಡಿವಿಲಿಯರ್ಸ್ ಕೂಡ ಇದ್ದಾರೆ. ಡಿವಿಲಿಯರ್ಸ್ ಐಪಿಎಲ್ 2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಈ ಐಪಿಎಲ್ ಸೀಸನ್ ನಲ್ಲಿ ಡಿವಿಲಿಯರ್ಸ್ ತನ್ನ ಗೆಳತಿ ಡೇನಿಯಲ್ ಸ್ವಾರ್ಟ್ ಗೆ ತಾಜ್ ಮಹಲ್ ಎದುರು ಪ್ರಪೋಸ್ ಮಾಡಿದ್ದರು. ಇದಾದ ಬಳಿಕ 2013ರಲ್ಲಿ ಇಬ್ಬರೂ ವಿವಾಹವಾದರು. ಡಿವಿಲಿಯರ್ಸ್ ಮತ್ತು ಡೇನಿಯಲ್ಸ್ ಈಗ ಇಬ್ಬರು ಗಂಡು ಮತ್ತು ಒಬ್ಬ ಮಗಳನ್ನು ಹೊಂದಿದ್ದಾರೆ.
ಆರನ್ ಫಿಂಚ್: ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಆರನ್ ಫಿಂಚ್ ತನ್ನ ಗೆಳತಿ ಆಮಿ ಗ್ರಿಫಿತ್ಸ್ ಅವರನ್ನು 2018 ರಲ್ಲಿ ವಿವಾಹವಾದರು. ಇದಕ್ಕೂ ಮುನ್ನ ಅವರು ಬಹಳ ಕಾಲ ಸಹಬಾಳ್ವೆ ನಡೆಸಿದ್ದರು. ಐಪಿಎಲ್ ಸಮಯದಲ್ಲಿ ಫಿಂಚ್ ಆಮಿ ಅವರನ್ನು ಮದುವೆಯಾಗಲು ಪ್ರಪೋಸ್ ಮಾಡಿದ್ದರು. ಐಪಿಎಲ್ 2016ರ ಸಮಯದಲ್ಲಿ ಫಿಂಚ್ ಭಾರತದಲ್ಲಿ ಆಮಿಗೆ ಪ್ರಪೋಸ್ ಮಾಡಿದ್ದರು. ಈ ವಿಷಯವನ್ನು ಆಮಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದರು. ಫಿಂಚ್ ಅವರನ್ನು ಹುರಿದುಂಬಿಸಲು ಮತ್ತು ಐಪಿಎಲ್ ವೀಕ್ಷಿಸಲು ಆಮಿ ಭಾರತಕ್ಕೆ ಬಂದಿದ್ದರು. ಅದೇ ಸಮಯದಲ್ಲಿ ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ ಅವಳ ಬಳಿ ಮದುವೆಯ ಪ್ರಸ್ಥಾಪವನ್ನು ಮಾಡಿದ್ದರು.
ಕೃನಾಲ್ ಪಾಂಡ್ಯ: ಆಲ್ ರೌಂಡರ್ ಕೃನಾಲ್ ಪಾಂಡ್ಯ ಕಳೆದ ಋತುವಿಗೂ ಮುನ್ನ ಮುಂಬೈ ಇಂಡಿಯನ್ಸ್ ಪರ ಆಡಿದ್ದು, ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್ 2017ರ ಪ್ರಶಸ್ತಿಯನ್ನು ಗೆದ್ದ ನಂತರ, ಕೃನಾಲ್ ಎಲ್ಲರ ಮುಂದೆ ಪಂಖುರಿಗೆ ಮದುವೆಯ ಪ್ರಸ್ತಾಪ ಮಾಡಿದ್ದರು. ನಂತರ ಡಿಸೆಂಬರ್ 2017 ರಂದು ಕೃನಾಲ್ ಮತ್ತು ಪಂಖೂರಿ ವಿವಾಹವಾದರು. ಇತ್ತೀಚೆಗಷ್ಟೇ ಇವರಿಬ್ಬರು ಗಂಡು ಮಗವಿಗೆ ಪೋಷಕರಾಗಿದ್ದಾರೆ.
ಜಹೀರ್ ಖಾನ್: ಭಾರತದ ಮಾಜಿ ವೇಗಿ ಜಹೀರ್ ಖಾನ್ ಹುಡುಗಿಯರ ಬಗ್ಗೆ ತುಂಬಾ ನಾಚಿಕೆಪಡುತ್ತಾರೆ. 2017ರಲ್ಲಿ ಐಪಿಎಲ್ 10ನೇ ಸೀಸನ್, ಜಹೀರ್ ಖಾನ್ ತನ್ನ ಗೆಳತಿ ಸಾಗರಿಕಾ ಘೋಷ್ಗೆ ಪ್ರಪೋಸ್ ಮಾಡಿದ್ದರು. ಈ ಪಂದ್ಯದಲ್ಲಿ ಸಾಗರಿಕಾ ಜಹೀರ್ಗೆ ಬೆಂಬಲ ನೀಡಲು ಬಂದಿದ್ದರು. ಐಪಿಎಲ್ ಪಂದ್ಯದ ನಂತರ ನಡೆದ ಪಾರ್ಟಿಯಲ್ಲಿ ಜಹೀರ್ ಸಾಗರಿಕಾಗೆ ತನ್ನ ಪ್ರೀತಿಯ ನಿವೇದನೆ ಮಾಡಿದ್ದರು. ನಂತರ ಅವರಿಬ್ಬರೂ 23 ನವೆಂಬರ್ 2017 ರಂದು ವಿವಾಹವಾದರು.