ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಜಿತೇಶ್ ವಿಕೆಟ್ ಹಿಂದೆ ಚುರುಕಾಗಿ ಕಾಣುವುದು ಮಾತ್ರವಲ್ಲದೆ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2023 ರಲ್ಲಿ ಜಿತೇಶ್ 26.55 ರ ಸರಾಸರಿಯಲ್ಲಿ 260 ರನ್ ಗಳಿಸಿದ್ದಾರೆ. ಈ ವೇಳೆ ಸ್ಟ್ರೈಕ್ ರೇಟ್ 160 ಕ್ಕಿಂತ ಹೆಚ್ಚು. ಅವರು 18 ಬೌಂಡರಿ ಮತ್ತು 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪ್ರಸಕ್ತ ಐಪಿಎಲ್ ಋತುವಿನಲ್ಲಿ 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಜಿತೇಶ್ ಅವರ ಸ್ಟ್ರೈಕ್ ರೇಟ್ ಇದೆ ಎನ್ನುವುದು ಅಚ್ಚರಿ ಸಂಗತಿಯಾಗಿದೆ.
ಮಹಾರಾಷ್ಟ್ರದ ಅಮರಾವತಿಯಲ್ಲಿ 22 ಅಕ್ಟೋಬರ್ 1993 ರಂದು ಜನಿಸಿದ ಜಿತೇಶ್ ಇದುವರೆಗೆ 87 T20 ಪಂದ್ಯಗಳಲ್ಲಿ 29.79 ಸರಾಸರಿ ಮತ್ತು 149.85 ಸ್ಟ್ರೈಕ್ ರೇಟ್‌ನಲ್ಲಿ 2047 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 106 ಆಗಿದೆ. ಇದುವರೆಗೆ ಟಿ20 ಪಂದ್ಯಗಳಲ್ಲಿ 201 ಬೌಂಡರಿ ಹಾಗೂ 92 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ವಿಕೆಟ್‌ಗಳ ಹಿಂದೆಯೂ ಧೋನಿ ವೇಗದಲ್ಲಿದ್ದಾರೆ ಎಂದು ರೈನಾ ಹೇಳಿದ್ದಾರೆ.