IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

IPL 2023: ಟೀಂ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗರೊಬ್ಬರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ತಕ್ಷಣವೇ ಐಪಿಎಲ್‌ನಿಂದ ಕೊಹ್ಲಿ-ಗಂಬೀರ್ ನಿಷೇಧಿಸುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

First published:

  • 17

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳ ಕ್ರಿಕೆಟ್​ ಲೋಕದ ಚರ್ಚೆಗೆ ಗ್ರಾಸವಾಗಿದೆ. ಬೇರೆ ದೇಶಗಳ ಕ್ರಿಕೆಟ್ ಅಭಿಮಾನಿಗಳು ಕೂಡ ಇದೇ ವಿಚಾರವನ್ನು ಚರ್ಚಿಸುತ್ತಿದ್ದಾರೆ. ಕೊಹ್ಲಿ ಆಕ್ರೋಶ ಮತ್ತು ಗಂಭೀರ್ ಸಿಟ್ಟು ಐಪಿಎಲ್ ಬಿಸಿಯನ್ನು ಹೆಚ್ಚಿಸಿದೆ.

    MORE
    GALLERIES

  • 27

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ಸೀಸನ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಐಪಿಎಲ್‌ನ 15 ವರ್ಷಗಳ ಇತಿಹಾಸದಲ್ಲಿ ಹಿಂದೆಂದೂ ಆಟಗಾರರು ಮೈದಾನದ ಮಧ್ಯದಲ್ಲಿ ಈ ರೀತಿ ಜಗಳವಾಡಿರಲಿಲ್ಲ. ಆದರೆ ಆರ್‌ಸಿಬಿ ವಿರುದ್ಧ ಲಕ್ನೋ ಸೂಪರ್‌ಜೈಂಟ್ಸ್ ಪಂದ್ಯದ ವೇಳೆ ದೊಡ್ಡ ಫೈಟ್ ನಡೆಯಿತು.

    MORE
    GALLERIES

  • 37

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಪಂದ್ಯದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಜಗಳವಾಡಿದರು. ಆದರೆ ಫಾಫ್ ಡು ಪ್ಲೆಸಿಸ್ ಮತ್ತು ಕೆಎಲ್ ರಾಹುಲ್ ತಮ್ಮ ಸಮಚಿತ್ತವನ್ನು ಕಾಪಾಡಿಕೊಂಡು ಇಬ್ಬರ ಜಗಳ ತಪ್ಪಿಸಿದರು. ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಆರಂಭವಾದ ಜಟಾಪಟಿ ಕೊನೆಗೂ ಗಂಭೀರ್ ವರೆಗೂ ಹೋಯಿತು. ಇದಕ್ಕೆ ಸಂಬಂಧಿಸಿ ಬಿಸಿಸಿಐ ಈ ಮೂವರ ಮೇಲೆ ಭಾರಿ ದಂಡ ವಿಧಿಸಿದೆ.

    MORE
    GALLERIES

  • 47

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಆದರೆ, ಈ ಘಟನೆ ಬಗ್ಗೆ ಕ್ರಿಕೆಟ್ ದಿಗ್ಗಜ, ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಕ್ಷಣವೇ ಕೊಹ್ಲಿ-ಗಂಭೀರ್ ಅವರನ್ನು ಐಪಿಎಲ್‌ನಿಂದ ನಿಷೇಧಿಸುವಂತೆ ಬಿಸಿಸಿಐ ಕಾರ್ಯದರ್ಶಿಗೆ ಹೇಳಿದ್ದಾರೆ.

    MORE
    GALLERIES

  • 57

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಕೊಹ್ಲಿ-ಗಂಭೀರ್ ಅವರ ಓವರ್ ರಿಯಾಕ್ಷನ್ ಜಾಸ್ತಿಯಾಗಿದೆ, ಇಷ್ಟವಿಲ್ಲದಿದ್ದರೆ ಸ್ವಇಚ್ಛೆಯಿಂದ ನಿರ್ಗಮಿಸಿ, ಆದರೆ ಈ ರೀತಿ ಭಾರತೀಯ ಕ್ರಿಕೆಟ್ ಖ್ಯಾತಿಗೆ ಚ್ಯುತಿ ತರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ದಂಡ ವಿಧಿಸಿದರೆ ಅವರ ಓವರ್ ಆ್ಯಕ್ಷನ್ ನಿಲ್ಲುವುದಿಲ್ಲ, ಕಠಿಣ ಶಿಕ್ಷೆ ನೀಡಿದರೆ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

    MORE
    GALLERIES

  • 67

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಕೋಟಿಗಟ್ಟಲೆ ಸಂಭಾವನೆ ಪಡೆಯುವ ಕೊಹ್ಲಿ ಹಾಗೂ ಗಂಭೀರ್‌ಗೆ ದಂಡದ ಲೆಕ್ಕ ಹಾಕುವುದಿಲ್ಲ, ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂಬ ದೃಢ ಭರವಸೆ ಸಿಕ್ಕರೆ ಮಾತ್ರ ಲೀಗ್‌ನಲ್ಲಿ ಮುಂದುವರಿಯಲಿ, ಇಲ್ಲವಾದಲ್ಲಿ ಲೀಗ್‌ನಿಂದ ಹೊರ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ. ನಿಯಮಗಳನ್ನು ವಿರೋಧಿಸಿ ದೇಶದ ಗೌರವಕ್ಕೆ ಧಕ್ಕೆ ತರುವವರನ್ನು ಎಷ್ಟೇ ಸ್ಟಾರ್ ಕ್ರಿಕೆಟಿಗರಾದರೂ ಸಹಿಸಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    MORE
    GALLERIES

  • 77

    IPL 2023: ಕೊಹ್ಲಿ-ಗಂಭೀರ್​ ಅವರನ್ನು ಐಪಿಎಲ್​ನಿಂದ ಹೊರಹಾಕಿ! ಶಾಕಿಂಗ್​ ಹೇಳಿಕೆ ನೀಡಿದ ಮಾಜಿ ಆಟಗಾರ

    ಫುಟ್ಬಾಲ್ ಆಟದಲ್ಲಿದ್ದರೆ ರೆಡ್ ಕಾರ್ಡ್ ಇರುತ್ತದೆ. ಆ ವಿಧಾನವನ್ನು ಇಲ್ಲಿಯೂ ತರುವಂತೆ ಸೂಚಿಸಿದ್ದಾರೆ. ಈ ಹಿಂದೆಯೂ ಕೊಹ್ಲಿ ಮತ್ತು ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆ ಜಗಳವಾಡಿದ್ದು ಗೊತ್ತೇ ಇದೆ. ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಎಂದು ತಿಳಿದಿದ್ದಾರೆ.

    MORE
    GALLERIES