ಈ ಪಂದ್ಯವನ್ನು ಭುವನೇಶ್ವರ್ ಮುನ್ನಡೆಸಲಿದ್ದಾರೆ. ಭುವಿ ಏಳು ಪಂದ್ಯಗಳಲ್ಲಿ ನಾಯಕತ್ವ ಮಾಡಿದ್ದರು. ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ತಂಡದ ಸಂಯೋಜನೆ ಕಷ್ಟಕರವಾಗಿದೆ. ಟಾಪರ್ಡರ್ ಕೂಡ ದುರ್ಬಲವಾಗಿ ಕಾಣುತ್ತಿದೆ. 33 ವರ್ಷದ ಭುವನೇಶ್ವರ್ 2013 ರಿಂದ ಐಪಿಎಲ್‌ನಲ್ಲಿ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಅವರು 2019 ರಲ್ಲಿ ಆರು ಪಂದ್ಯಗಳಿಗೆ ಮತ್ತು 2022ರಲ್ಲಿ ಒಂದು ಪಂದ್ಯಕ್ಕೆ ನಾಯಕತ್ವ ವಹಿಸಿದ್ದರು. ಆದಾಗ್ಯೂ, SRH ಇವುಗಳಲ್ಲಿ ಎರಡನ್ನು ಮಾತ್ರ ಗೆದ್ದಿದೆ.
ಕಳೆದ ವರ್ಷ ಪಂಜಾಬ್ ತಂಡದ ನಾಯಕರಾಗಿದ್ದ ಮಯಾಂಕ್ ಮಾರ್ಚ್‌ನಲ್ಲಿ ನಡೆದ ಇರಾನಿ ಕಪ್‌ನಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ಆದರೆ ತಂಡವನ್ನು ಸೇರಿಕೊಂಡಿರುವ ಹ್ಯಾರಿ ಬ್ರೂಕ್ ಮತ್ತು ಗ್ಲೆನ್ ಫಿಲಿಪ್ಸ್‌ನೊಂದಿಗೆ ಮಧ್ಯಮ ಕ್ರಮಾಂಕವು ಬಲಿಷ್ಠವಾಗಿದೆ. ವೇಗಿಗಳಾದ ಉಮ್ರಾನ್, ಭುವನೇಶ್ವರ್, ಕಾರ್ತಿಕ್ ತ್ಯಾಗಿ ಮತ್ತು ನಟರಾಜನ್ ಒಳಗೊಂಡ ಬೌಲಿಂಗ್ ತಂಡದ ಮೇಲೆ ರೈಸರ್ಸ್ ಹೆಚ್ಚು ಅವಲಂಬಿತವಾಗಿದೆ.