ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 182 ರನ್ ಗಳಿಸಿತು. ಹೆನ್ರಿಚ್ ಕ್ಲಾಸೆನ್ (29 ಎಸೆತಗಳಲ್ಲಿ 47; 3 ಬೌಂಡರಿ, 3 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಅಬ್ದುಲ್ ಸಮದ್ (25 ಎಸೆತಗಳಲ್ಲಿ ಔಟಾಗದೆ 37; 1 ಬೌಂಡರಿ, 4 ಸಿಕ್ಸರ್) ಮತ್ತು ಅನ್ಮೋಲ್ ಪ್ರೀತ್ (27 ಎಸೆತಗಳಲ್ಲಿ 36; 7 ಬೌಂಡರಿ) ಆಕರ್ಷಕ ಆಟವಾಡಿದರು.