ಮಿನಿ ಹರಾಜು ಪ್ರಕ್ರಿಯೆಯಲ್ಲಿ ಐಪಿಎಲ್ ಫ್ರಾಂಚೈಸಿಗಳು ಇಂಗ್ಲೆಂಡ್ ಆಟಗಾರರ ಮೇಲೆ ಹಣದ ಮಳೆಯನ್ನೇ ಸುರಿಸಿದ್ದಾರೆ. ಅದರಲ್ಲೂ ಆಲ್ರೌಂಡರ್ ಸ್ಯಾಮ್ ಕರನ್, ಬೆನ್ ಸ್ಟೋಕ್ಸ್ ಸೇರಿದಂತೆ ಪವರ್ ಹಿಟ್ಟರ್ ಹ್ಯಾರಿ ಬ್ರೂಕ್ಗೆ ಭಾರೀ ಮೊತ್ತ ನೀಡಿ ಖರೀದಿ ಮಾಡಲಾಗಿತ್ತು. ಆಸ್ಟ್ರೇಲಿಯಾದ ಯುವ ಬೌಲರ್ ಕ್ಯಾಮೆರಾನ್ ಗ್ರೀನ್ ಕೂಡ ದಾಖಲೆಯ ಮೊತ್ತವನ್ನು ಪಡೆದುಕೊಂಡಿದ್ದರು.
ಸ್ಯಾಮ್ ಕರನ್ ಖರೀದಿ ಮಾಡಲು ಪೈಪೋಟಿಗೆ ಬಿದ್ದ ಫ್ರಾಂಚೈಸಿಗಳು ಟಾಮ್ ಕರ್ರನ್ರನ್ನು ಮಾತ್ರ ಕಣ್ಣೆತ್ತಿಯೂ ನೋಡಲಿಲ್ಲ. ಮೂಲ ಬೆಲೆಗೂ ಖರೀದಿ ಮಾಡುವ ಸಹಾಸಕ್ಕೂ ಫ್ರಾಂಚೈಸಿಗಳು ಕೈ ಹಾಕಲಿಲ್ಲ. ಪರಿಣಾಮ ಟಾಮ್ ಕರ್ರನ್ ಅನ್ಸೋಲ್ಡ್ ಆಗಿಯೇ ಉಳಿದರು. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಟಾಮ್ ಕರ್ರನ್, ಈಗ ಹಲವು ಲೀಗ್‌ಗಳಿವೆ. ಐಪಿಎಲ್ ನಿಸ್ಸಂಶಯವಾಗಿ ದೊಡ್ಡ ಲೀಗ್. ಅಷ್ಟೆ ಅಲ್ಲದೆ ಉನ್ನತ ಗುಣಮಟ್ಟದೊಂದಿಗೆ ಸಾಕಷ್ಟು ಲೀಗ್‌ಗಳು ನಡೆಯುತ್ತಿವೆ. ಯಾವುದೇ ಲೀಗ್ ಆಗಿರಲಿ, ನನ್ನ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ನಾನು ಬಯಸುತ್ತೇನೆ ಎಂದಿದ್ದಾರೆ.