ಅವರು ಗುಜುರಾತ್ ವಿರುದ್ಧ ಆಡಿದ ಪ್ರತಿ ಪಂದ್ಯದಲ್ಲೂ 50ಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಅವರು 70ರ ಸರಾಸರಿಯಲ್ಲಿ 278 ರನ್ ಗಳಿಸಿದರು. 92 ರನ್ ಉತ್ತಮ ಪ್ರದರ್ಶನವಾಗಿದೆ. ಸ್ಟ್ರೈಕ್ ರೇಟ್ 146 ಆಗಿದೆ. 16 ಸಿಕ್ಸರ್ ಗಳೂ ಅವರ ಖಾತೆಯಲ್ಲಿವೆ. ಗುಜರಾತ್ ಟೈಟಾನ್ಸ್ ವಿರುದ್ಧ ಒಟ್ಟಾರೆ ಗರಿಷ್ಠ ರನ್ ಗಳಿಸಿದ ಆಟಗಾರ ರುತುರಾಜ್. ವಿರಾಟ್ ಕೊಹ್ಲಿ 232 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
26 ವರ್ಷದ ರುತುರಾಜ್ ಐಪಿಎಲ್ 2023ರಲ್ಲಿ ಇದುವರೆಗೆ 15 ಪಂದ್ಯಗಳಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 43 ಸರಾಸರಿಯಲ್ಲಿ 564 ರನ್ ಗಳಿಸಿದ್ದಾರೆ. 4 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದುವರೆಗೆ 29 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರುತುರಾಜ್ ಆರನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿಸ್ 730 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.