ಹಿಟ್ಮ್ಯಾನ್ 30 ಏಪ್ರಿಲ್ 1987ರಂದು ಮಹಾರಾಷ್ಟ್ರದ ನಾಗ್ಪುರದ ಬನ್ಸೋಡ್ನಲ್ಲಿ ಜನಿಸಿದರು. ಅಮ್ಮ ಪೂರ್ಣಿಮಾ ಶರ್ಮಾ ವಿಶಾಖಪಟ್ಟಣದವರು. ಅವರ ತಂದೆ ಗುರುನಾಥ ಶರ್ಮಾ ಅವರು ಸಾರಿಗೆ ಸಂಸ್ಥೆಯ ಸ್ಟೋರ್ ಹೌಸ್‌ನಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದರು. 1999ರಲ್ಲಿ ಚಿಕ್ಕಪ್ಪನಿಂದ ಹಣ ಪಡೆದು ಕ್ರಿಕೆಟ್ ಶಿಬಿರಕ್ಕೆ ಸೇರಿಕೊಂಡರು. ಆ ನಂತರ ಹಂತ ಹಂತವಾಗಿ ಮೇಲೇರಿದ ಅವರು ಇದೀಗ ಟೀಂ ಇಂಡಿಯಾ ನಾಯಕರಾಗಿದ್ದಾರೆ.
15 ವರ್ಷದೊಳಗಿನವರ ರಾಷ್ಟ್ರೀಯ ಶಿಬಿರದಲ್ಲಿ ನಾನು ರೋಹಿತ್ ಅವರನ್ನು ಮೊದಲು ಭೇಟಿಯಾದಾಗ, ಅವರು ವಿಶೇಷ ಆಟಗಾರ ಎಂದು ಎಲ್ಲರೂ ಹೇಳಿದರು. ನಂತರ ರೋಹಿತ್ ಗೆ ಎದುರಾಳಿಯಾಗಿ ಆಡುತ್ತಾ ನಾನು ಅವರ ವಿಕೆಟ್ ಪಡೆದೆ. ಮುಂಬೈನ ಟಿಪಿಕಲ್ ಹುಡುಗನಂತೆ ರೋಹಿತ್ ಹೆಚ್ಚು ಮಾತನಾಡುವುದಿಲ್ಲ. ಆದರೆ ಆಟದಲ್ಲಿ ಆಕ್ರಮಣಕಾರಿ. ನಮಗೆ ಒಬ್ಬರಿಗೊಬ್ಬರು ಪರಿಚಯವಿಲ್ಲದಿದ್ದರೂ ಅವರು ನನ್ನ ಕಡೆಗೆ ಆಕ್ರಮಣಕಾರಿಯಾಗಿ ಆಡಿದ್ದು ನನಗೆ ಆಶ್ಚರ್ಯವಾಯಿತು. ಆದರೆ ಆ ನಂತರ ನಮ್ಮ ಸ್ನೇಹ ಬೆಳೆಯಿತು ಎಂದು ಓಜಾ ಹೇಳಿದ್ದಾರೆ.
ರೋಹಿತ್ ಶರ್ಮಾ ತಮ್ಮ ವೃತ್ತಿಜೀವನವನ್ನು ಆಫ್ ಸ್ಪಿನ್ನರ್ ಆಗಿ ಪ್ರಾರಂಭಿಸಿದರು. ಬಾಲ್ಯದ ಕೋಚ್ ಲಾಡ್ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಗಮನಿಸಿ ಎಂಟನೇ ಸ್ಥಾನದಿಂದ ಇನಿಂಗ್ಸ್ ಆರಂಭಿಸಲು ಹೇಳಿದರು. ಆರಂಭಿಕರಾಗಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದರು. ಹ್ಯಾರಿಸ್ ಗಿಲ್ಲೆಸ್ ಶೀಲ್ಡ್ ಶಾಲೆಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಮಿಂಚಿದ್ದರು. ಅದರ ನಂತರ, ಅವರು ಟೀಂ ಇಂಡಿಯಾದಲ್ಲಿ ತಮ್ಮ ಪ್ರಥಮ ದರ್ಜೆ ವೃತ್ತಿಜೀವನವನ್ನು ಆರಂಭಿಸಿದರು.