ಟಿ20 ವಿಶ್ವಕಪ್ 2024 ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯವಿದೆ. ಆದರೆ, ಬಿಸಿಸಿಐ ಆಯ್ಕೆಗಾರರು ಈ ವರ್ಷದ ಆರಂಭದಿಂದಲೇ ಈ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದಾರೆ. ಇದು ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕತ್ವವನ್ನು ಹಸ್ತಾಂತರಿಸುವ ಮೂಲಕ ಆರಂಭವಾಯಿತು. ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ ವೈಫಲ್ಯ ಅನುಭವಿಸಿರುವ ಆಯ್ಕೆದಾರರು ಹಿರಿಯ ಆಟಗಾರರನ್ನು ಬದಿಗೊತ್ತಲು ನಿರ್ಧರಿಸಿದ್ದಾರೆ.
ಇದರೊಂದಿಗೆ 2024ರ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಹೊಸ ತಂಡವನ್ನು ಕಣಕ್ಕಿಳಿಸುವುದು ಬಹುತೇಕ ನಿಚ್ಚಳವಾಗಿದೆ. ಇದರೊಂದಿಗೆ ಟಿ20ಯಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರನ್ನು ಹೊರಹಾಕಲು ವೇದಿಕೆ ಸಜ್ಜಾಗಿದೆ. ಶುಭಮನ್ ಗಿಲ್ ಎಲ್ಲಾ ಮಾದರಿಗಳಲ್ಲಿ ಆರಂಭಿಕ ಆಟಗಾರರಾಗುವ ಸಾಧ್ಯತೆ ಇದೆ. ಐಪಿಎಲ್ 2023 ರಲ್ಲಿ ಯಶಸ್ವಿ ಜೈಸ್ವಾಲ್ ಅವರ ಅದ್ಭುತ ಪ್ರದರ್ಶನದ ನಂತರ, ಆಯ್ಕೆದಾರರಿಗೆ ಭರವಸೆ ಹೆಚ್ಚಿದೆ.
ಗಾಯದಿಂದಾಗಿ ಕೆಎಲ್ ರಾಹುಲ್ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಆದರೆ, ಈ ಹಿಂದೆ ಆಡಿದ ಎಲ್ಲ ಪಂದ್ಯಗಳಲ್ಲೂ ರಾಹುಲ್ ಸ್ಟ್ರೈಕ್ ರೇಟ್ ದೊಡ್ಡ ಸಮಸ್ಯೆಆಐಇತ್ತು. ರಾಹುಲ್ 9 ಪಂದ್ಯಗಳಲ್ಲಿ 113 ಸ್ಟ್ರೈಕ್ ರೇಟ್‌ನೊಂದಿಗೆ 274 ರನ್ ಗಳಿಸಿದ್ದರು. ಟಿ20 ಮಾದರಿಯಲ್ಲಿ ಸ್ಟ್ರೈಕ್ ರೇಟ್ ಮುಖ್ಯ. ಬದಲಾಗುತ್ತಿರುವ ಆಟದಿಂದಾಗಿ ಈ ಸ್ವರೂಪಕ್ಕೆ ಆಕ್ರಮಣಕಾರಿ ಆಟಗಾರರು ಬಹಳ ಮುಖ್ಯ.
ಯಶಸ್ವಿ ಜೈಸ್ವಾಲ್ 11 ಪಂದ್ಯಗಳಲ್ಲಿ 52 ರ ಸರಾಸರಿಯಲ್ಲಿ 575 ರನ್ ಗಳಿಸಿದ್ದಾರೆ. ಐಪಿಎಲ್ 2023ರಲ್ಲಿ ಸ್ಟ್ರೈಕ್ ರೇಟ್ 167 ಆಗಿದೆ. ಕಳೆದ ಪಂದ್ಯದಲ್ಲಿ ಯಶಸ್ವಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಪವರ್‌ಪ್ಲೇಯಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡುವ ಧೈರ್ಯವಿದೆ. ಈ ಐಪಿಎಲ್‌ನಲ್ಲಿ ಪವರ್‌ಪ್ಲೇನಲ್ಲಿ 179 ರನ್ ಗಳಿಸಿದ್ದಾರೆ. ಇದರೊಂದಿಗೆ ಈ ಹುಡುಗನನ್ನು ಆಯ್ಕೆ ಮಾಡಲು ಆಯ್ಕೆಗಾರರು ಸಿದ್ಧರಾಗಿದ್ದಾರೆ.