IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

IPL 2023: ಈ ಬಾರಿಯ ಐಪಿಎಲ್​ನಲ್ಲಿ ಕೆಲವು ಸ್ಟಾರ್ ಆಟಗಾರರು ಕಣಕ್ಕಿಳಿಯುತ್ತಿಲ್ಲ. ಕೆಲವರು ಗಾಯಗಳಿಂದ ದೂರವಾಗಿದ್ದರೆ, ಇನ್ನು ಕೆಲವರು ವೈಯಕ್ತಿಕ ಕಾರಣಗಳಿಂದ ದೂರವಾಗಿದ್ದಾರೆ.

First published:

 • 19

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಐಪಿಎಲ್​ನ 16ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ವರ್ಷ ಮುಂಬೈ ಇಂಡಿಯನ್ಸ್ ಸೇರಿದಂತೆ 6 ತಂಡಗಳಿಗೆ ಟೂರ್ನಿಗೂ ಮುನ್ನ ಆಘಾತವಾಗಿದೆ. ಹೌದು, ಸ್ಟಾರ್ ಆಟಗಾರರಿಲ್ಲದೇ ಈ ತಂಡಗಳು ಮೈದಾನಕ್ಕಿಳಿಯಲಿವೆ. ಈ ವರ್ಷದ ಐಪಿಎಲ್‌ನಲ್ಲಿ ಯಾವ ಸ್ಟಾರ್ ಆಟಗಾರರು ಕಾಣಿಸಿಕೊಳ್ಳುವುದಿಲ್ಲ ಎಂದು ನೋಡೋಣ ಬನ್ನಿ.

  MORE
  GALLERIES

 • 29

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ರಿಷಭ್​ ಪಂತ್: ದೆಹಲಿ ಕ್ಯಾಪಿಟಲ್ಸ್ ನಾಯಕ ರಿಷಭ್​ ಪಂತ್ ಡಿಸೆಂಬರ್ 31, 2022 ರಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಕಾಲಿಗೆ ಎರಡು ಸರ್ಜರಿ ಮಾಡಲಾಗಿದ್ದು, ಸದ್ಯ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪಂತ್ ಐಪಿಎಲ್ ಹಾಗೂ ಪ್ರಮುಖ ಟೂರ್ನಿಗಳಿಂದ ಹೊರಗುಳಿದಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರಿಗೆ ದೆಹಲಿ ಕ್ಯಾಪಿಟಲ್ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

  MORE
  GALLERIES

 • 39

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಜಸ್ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಕಳೆದ ಕೆಲವು ವರ್ಷಗಳಿಂದ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಐಪಿಎಲ್ 16 ನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

  MORE
  GALLERIES

 • 49

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಜೇ ರಿಚರ್ಡ್ಸನ್: ಮುಂಬೈ ಇಂಡಿಯನ್​ಗೆ ಜೇ ರಿಚರ್ಡ್ಸನ್ ರೂಪದಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯಾದ ವೇಗದ ಬೌಲರ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರೊಂದಿಗೆ ಜೇ ರಿಚರ್ಡ್ಸನ್ ಈ ವರ್ಷ ಐಪಿಎಲ್ 2023ರಲ್ಲಿ ಕಣಕ್ಕಿಳಿಯುತ್ತಿಲ್ಲ.

  MORE
  GALLERIES

 • 59

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಕೈಲ್ ಜೇಮಿಸನ್: ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಕೈಲ್ ಜೇಮಿಸನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಐಪಿಎಲ್ 2023ರ ಮೊದಲು ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಸೀಸನ್‌ಗೆ ಅವರು ಲಭ್ಯ ಇರುವುದಿಲ್ಲ.

  MORE
  GALLERIES

 • 69

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಪ್ರಸಿದ್ಧ್‌ ಕೃಷ್ಣ: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರೀ ಆಘಾತ ಎದುರಾಗಿದೆ. ಪ್ರಸಿದ್ಧ್‌ ಕೃಷ್ಣ ಬೌಲರ್ ಈ ವರ್ಷ ಐಪಿಎಲ್ ನಿಂದ ದೂರ ಉಳಿಯಲಿದ್ದಾರೆ. ಕೆಲ ತಿಂಗಳ ಹಿಂದೆ ಕೃಷ್ಣ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

  MORE
  GALLERIES

 • 79

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ವಿಲ್ ಜಾಕ್ಸ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟಿಗ ವಿಲ್ ಜಾಕ್ಸ್ ಅವರು ಗಾಯದ ಕಾರಣ ಐಪಿಎಲ್​ 2023ರಿಂದ ಹೊರಗುಳಿದಿದ್ದಾರೆ. RCB ವಿಲ್ ಜಾಕ್ಸ್ ಬದಲಿಗೆ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಆಯ್ಕೆ ಮಾಡಿದೆ.

  MORE
  GALLERIES

 • 89

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ಕೂಡ ಈ ವರ್ಷ ಐಪಿಎಲ್ ಆಡುತ್ತಿಲ್ಲ. ಕಳೆದ ವರ್ಷ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು, ಆದರೆ ಈ ವರ್ಷ ಅವರು ಆಡುತ್ತಿಲ್ಲ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ವರ್ಷದ ಆಶಸ್ ಟೆಸ್ಟ್ ಸರಣಿಗಾಗಿ ಅವರು ಐಪಿಎಲ್‌ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

  MORE
  GALLERIES

 • 99

  IPL 2023: ಈ ಬಾರಿ ಐಪಿಎಲ್‌ನಲ್ಲಿ ಆಡ್ತಿಲ್ಲ ಈ ಸ್ಟಾರ್ಸ್ ಪ್ಲೇಯರ್ಸ್, ಈ 6 ತಂಡಗಳಿಗೆ ಟೆನ್ಶನ್ನೋ ಟೆನ್ಶನ್!

  ಅನ್ರಿಚ್ ನೊರ್ಟ್ಜೆ: ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಬೌಲರ್ ಅನ್ರಿಚ್ ನೊರ್ಟ್ಜೆ ಗಾಯದ ಕಾರಣ IPL 2023 ನಿಂದ ಹೊರಗುಳಿದಿದ್ದಾರೆ. ಈಗಾಗಲೇ ಪಂತ್ ಅವರ ಸೇವೆಯನ್ನು ಕಳೆದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆ ಇದು ಭಾರೀ ಆಘಾತ ಎಂದೇ ಹೇಳಬಹುದು.

  MORE
  GALLERIES