GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

KKR vs GT: ಇಂಡಿಯನ್ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ರೋಚಕ ಪಂದ್ಯಗಳನ್ನು ನೋಡಲಾಗಿದೆ, ಆದರೆ ಏಪ್ರಿಲ್ 9 ರ ಭಾನುವಾರದ ದಿನವು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲೂ ಹ್ಯಾಟ್ರಿಕ್ ಮತ್ತು ಸತತ 5 ಸಿಕ್ಸರ್‌ಗಳು ಹೊರಬಂದವು.

First published:

  • 17

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ಭಾನುವಾರ ಐಪಿಎಲ್‌ನ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಣಾಹಣಿ ನಡೆಯಿತು. ಸಾಯಿ ಸುದರ್ಶನ್ ಮತ್ತು ವಿಜಯ್ ಶಂಕರ್ ಅವರ ಅರ್ಧಶತಕದ ಬಲದಿಂದ ತಂಡವು 4 ವಿಕೆಟ್‌ಗೆ 204 ರನ್ ಗಳಿಸಿತು.

    MORE
    GALLERIES

  • 27

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದ ಕಾರಣ ಕೋಲ್ಕತ್ತಾ ವಿರುದ್ಧ ಆಡಲಿಲ್ಲ. ವಿಜಯ್ ಶಂಕರ್ ಅವರನ್ನು ಆಡುವ 11ರಲ್ಲಿ ಸೇರಿಸಲಾಯಿತು ಮತ್ತು ಡೇವಿಡ್ ಮಿಲ್ಲರ್ ಅವರಿಗಿಂತ ಮುಂಚಿತವಾಗಿ ಬ್ಯಾಟ್‌ಗೆ ಕಳುಹಿಸಲಾಯಿತು. ಈ ಬ್ಯಾಟರ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸ್ಕೋರ್ ಅನ್ನು 204 ರನ್‌ಗಳಿಗೆ ಕೊಂಡೊಯ್ದರು.

    MORE
    GALLERIES

  • 37

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ಗುಜರಾತ್ ತಂಡದ ಬ್ಯಾಟಿಂಗ್‌ನಲ್ಲಿ ವಿಜಯ್ ಶಂಕರ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರೆ, ಬೌಲಿಂಗ್‌ನಲ್ಲಿ ರಶೀದ್ ಖಾನ್ ಅದೇ ರೀತಿ ಮಾಡಿದರು. ಸತತ ಮೂರು ಎಸೆತಗಳಲ್ಲಿ ಆಂಡ್ರೆ ರಸೆಲ್, ಸುನಿಲ್ ನರೈನ್ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಕಬಳಿಸುವ ಮೂಲಕ ಹ್ಯಾಟ್ರಿಕ್ ದಾಖಲೆ ಬರೆದರು.

    MORE
    GALLERIES

  • 47

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ರಶೀದ್ ಖಾನ್ ಅವರ ಮೊದಲ ಐಪಿಎಲ್ ಹ್ಯಾಟ್ರಿಕ್ ವಿಕೆಟ್ ಇದಾಗಿದೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಅಫ್ಘಾನ್ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಅಷ್ಟೇ ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಹ್ಯಾಟ್ರಿಕ್ ವಿಕೆಟ್ ಪಡೆದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

    MORE
    GALLERIES

  • 57

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ಕೆರಿಬಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್​ ಲೀಗ್​ನಲ್ಲೂ ರಶೀದ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದೀಗ ಐಪಿಎಲ್​ನಲ್ಲಿ ಹ್ಯಾಟ್ರಿಕ್​ ಪಡೆಯುವ ಮೂಲಕ ಟಿ20 ಕ್ರಿಕೆಟ್​ನಲ್ಲಿ 4 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    MORE
    GALLERIES

  • 67

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ರಿಂಕು ಸಿಂಗ್ ಕೊನೆಯ 20ನೇ ಓವರ್​ನಲ್ಲಿ ಮ್ಯಾಜಿಕ್​ ಮಾಡಿದರು. 30 ರನ್ ಗಳಿಸಿ ಸತತ 5 ಸಿಕ್ಸರ್‌ಗಳನ್ನು ಒಂದರ ಹಿಂದೆ ಒಂದು ಬಾರಿಸಿ ತಂಡವನ್ನು ಗೆಲ್ಲಿಸಿದರು. ಇನ್ನು, ಕ್ರಿಸ್ ಗೇಲ್, ರಾಹುಲ್ ತೆವಾಟಿಯಾ, ರವೀಂದ್ರ ಜಡೇಜಾ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್ 5 ಸಿಕ್ಸ್ ಹೊಡೆದಿದ್ದಾರೆ.

    MORE
    GALLERIES

  • 77

    GT vs KKR: ಐಪಿಎಲ್​ನಲ್ಲಿ ಇತಿಹಾಸ ನಿರ್ಮಿಸಿದ ಗುಜರಾತ್​-ಕೋಲ್ಕತ್ತಾ ಪಂದ್ಯ; ದಾಖಲೆಗಳು ಪುಡಿ ಪುಡಿ!

    ರಿಂಕು ಸಿಂಗ್ ಗೆ 20ನೇ ಓವರ್ ನಲ್ಲಿ 29 ರನ್ ಗಳ ಬೃಹತ್ ಗುರಿ ಚೇಸ್​ ಮಾಡಿದ ಏಕೈಕ ಆಟಗಾರ ರಿಂಕು ಆದರು. ಇದಕ್ಕೂ ಮುನ್ನ 2022ರಲ್ಲಿ ಗುಜರಾತ್-ಹೈದರಾಬದ್​ ಪಂದ್ಯದಲ್ಲಿ 22 ರನ್, 2016ರಲ್ಲಿ ಪಂಜಾಬ್​ ಮತ್ತು ಪುಣೆ ಪಂದ್ಯದಲ್ಲಿ 23 ರನ್ ಕೊನೆ ಓವರ್​ನಲ್ಲಿ ಚೇಸ್​ ಮಾಡಿದ್ದು ದೊಡ್ಡ ಮೊತ್ತವಾಗಿತ್ತು.

    MORE
    GALLERIES