ರಿಷಭ್ ಪಂತ್ ಅವರಿಗೆ ಅಪರೂಪದ ಗೌರವ ನೀಡಲು ಡೆಲ್ಲಿ ಕ್ಯಾಪಿಟಲ್ಸ್ ನಿರ್ಧರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್ ಐಪಿಎಲ್ 2023ರ ಸೀಸನ್ ನಲ್ಲಿ ಪಂತ್ ಅವರ ಜರ್ಸಿ ಸಂಖ್ಯೆಯೊಂದಿಗೆ (17) ಮೈದಾನಕ್ಕಿಳಿಯಲು ನಿರ್ಧರಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಇದನ್ನು ಖಚಿತಪಡಿಸಿದ್ದಾರೆ. ತಮ್ಮ ತಂಡವು ರಿಷಭ್ ಪಂತ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.
ರಿಷಭ್ ಪಂತ್ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಪಾಂಟಿಂಗ್ ಹೇಳಿದ್ದಾರೆ. ಪ್ರತಿ ಪಂದ್ಯಕ್ಕೂ ಡಗೌಟ್‌ನಲ್ಲಿ ಪಂತ್ ಅವರ ಪಕ್ಕದಲ್ಲಿ ಕುಳಿತುಕೊಳ್ಳಬೇಕೆಂದು ಬಯಸುವುದಾಗಿ ಹೇಳಿದ್ದಾರೆ. ಇದರ ಭಾಗವಾಗಿ, ಪಾಂಟಿಂಗ್ ಅವರು ತಮ್ಮ ಜರ್ಸಿ ಸಂಖ್ಯೆಯನ್ನು ಅವರ ಟೀ-ಶರ್ಟ್‌ಗಳು ಅಥವಾ ಕ್ಯಾಪ್‌ಗಳ ಮೇಲೆ ಮುದ್ರಿಸಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ.