ಈ ಪಂದ್ಯಕ್ಕೂ ಮುನ್ನ ಟಿ20 ಮಾದರಿಯಲ್ಲಿ 14 ಪಂದ್ಯಗಳನ್ನು ಆಡಿರುವ ವೈಶಾಕ್ 23 ವಿಕೆಟ್ ಕಬಳಿಸಿದ್ದರು. ಎಕಾನಮಿ 6.92 ಆಗಿರುವುದು ಗಮನಾರ್ಹ. ಹಿಂದಿನ ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಕಳಪೆ ಬೌಲಿಂಗ್ ನಿಂದಾಗಿ ಆರ್ ಸಿಬಿ ಸೋಲನುಭವಿಸಿತ್ತು. ಆದರೆ, ವೈಶಾಕ್ ಸೇರ್ಪಡೆಯಿಂದ ಆರ್‌ಸಿಬಿ ಬೌಲಿಂಗ್ ಕೊಂಚ ಬಲಿಷ್ಠವಾಗಿದೆ ಎಂದೇ ಹೇಳಬೇಕು.