RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

SRH vs RCB: ಇಂದು ಹೈದರಾಬಾದ್​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಆದರೆ ಪಂದ್ಯಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಹೊಸ ಭಯ ಶುರುವಾಗಿದೆ.

First published:

  • 17

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ ಫೈಪೋಟಿ ನಡೆಸಲಿದೆ.

    MORE
    GALLERIES

  • 27

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಈ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ನಡೆಯಲಿದೆ. ಆದರೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಹೊಸ ಭಯ ಶುರುವಾಗಿದೆ.

    MORE
    GALLERIES

  • 37

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಹೌದು, ಆರ್​ಸಿಬಿ ಮತ್ತು ಎಸ್​ಆರ್​ಎಚ್​ ನಡುವಿನ ಹೈವೋಲ್ಟೇಜ್​ ಪಂದ್ಯವು ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಇದೀಗ ಆರ್​ಸಿಬಿ ತಂಡಕ್ಕೆ ಇದೀಗ ಹೈದರಾಬಾದ್​ನ ಮೈದಾನವೇ ದೊಡ್ಡ ಚಿಂತೆಯಾಗಿದೆ.

    MORE
    GALLERIES

  • 47

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಏಕೆಂದರೆ, ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಇದುವರೆಗೆ 10 ಪಂದ್ಯಗಳನ್ನಾಡಿದೆ. ಆದರೆ ಆರ್​ಸಿಬಿ ತಂಡ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಒಂದು ಪಂದ್ಯ ರದ್ದಾಗಿತ್ತು. ಈ ಮೂಲಕ10ರಲ್ಲಿ 7 ರಲ್ಲಿ ಸೋಲನುಭವಿಸಿದೆ.

    MORE
    GALLERIES

  • 57

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಉಭಯ ತಂಡಗಳು ಕೊನೆಯಬಾರಿ 2019ರಲ್ಲಿ ಮುಖಾಮುಖಿ ಆಗಿದ್ದವು. ಆದರೆ ಆ ಪಂದ್ಯದಲ್ಲಿ ಆರ್​ಸಿಬಿ ತಂಡವು 113 ರನ್​ಗಳಿಗೆ ಆಲೌಟ್​ ಆಗಿತ್ತು. ಈ ಮೂಲಕ ಹೀನಾಯ ಸೋಲನ್ನಪ್ಪಿತ್ತು.

    MORE
    GALLERIES

  • 67

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ರಾಜೀವ್​ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿಆರ್​ಸಿಬಿ ತಂಡ ಕೊನೆಯ ಬಾರಿ 2015ರಲ್ಲಿ ಜಯ ಸಾಧಿಸಿತ್ತು. ಅದೂ ಸಹ ಡಕ್​ ವರ್ಥ್​ ಲೂಯಿಸ್​ ನಿಯಮದ ಪ್ರಕಾರವಾಗಿದೆ. ಹೀಗಾಗಿ 8 ವರ್ಷಗಳಿಂದ ಆರ್​ಸಿಬಿ ಈ ಮೈದಾನದಲ್ಲಿ ಗೆದ್ದಿಲ್ಲ.

    MORE
    GALLERIES

  • 77

    RCB vs SRH: ಹೈದರಾಬಾದ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಹೊಸ ಟೆನ್ಷನ್​, ಈ ಪಿಚ್‌ನಲ್ಲಿ ಗೆಲ್ಲೋದೇ ಕಷ್ಟವಂತೆ!

    ಐಪಿಎಲ್‌ನಲ್ಲಿ ಆರ್​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ 21 ಬಾರಿ ಮುಖಾಮುಖಿಯಾಗಿದೆ. ಈ 21 ಪಂದ್ಯಗಳಲ್ಲಿ ಸನ್‌ರೈಸರ್ಸ್ 11 ಗೆದ್ದಿದ್ದರೆ, RCB 9 ಪಂದ್ಯ ಗೆದ್ದಿದೆ. ಹೈದರಾಬಾದ್​ ಸ್ವಲ್ಪ ಉತ್ತಮವಾದ ದಾಖಲೆ ಹೊಂದಿದ್ದರೂ ಸಹ ಆರ್​ಸಿಬಿ ಉತ್ತಮ ಲಯದಲ್ಲಿದೆ. ಈ ಎರಡು ತಂಡಗಳ ನಡುವಿನ ಒಂದು ಪಂದ್ಯ ಟೈ ಆಗಿತ್ತು.

    MORE
    GALLERIES