ಕಡೆಯ ಎಸೆತದಲ್ಲಿ ಒಂದು ರನ್ ಬೇಕಿತ್ತು. ಎಲ್ಎಸ್ಜಿ ತಂಡದ ಕೊನೆಯ ಇಬ್ಬರು ಆಟಗಾರರು ಸ್ಕ್ರೀಜ್ನಲ್ಲಿದ್ದರು. ಸ್ಟ್ರೈಕ್ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್ಗೆ ತಾಗದೆ ಕೀಪರ್ ಸೈರಿತು. ಕೀಪರ್ ದಿನೇಶ್ ಕಾರ್ತಿಕ್ ವಿಕೆಟ್ಗೆಂದು ಎಸೆದರೂ ಅದು ಗುರಿ ತಪ್ಪಿತು. ಅತ್ತ ಆವೇಶ್ ಒಂದು ರನ್ ಕಲೆಹಾಕಿ ಲಖನೌ ಸೂಪರ್ ಜೇಂಟ್ಸ್ ರೋಚಕ ಜಯ ಸಾಧಿಸಿತ್ತು.