RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

RCB vs LSG: ನವೀನ್-ಉಲ್-ಹಕ್ ಅವರಿಗೆ ನಿಂದಿಸಿದ್ದಕ್ಕೆ ಗಂಭೀರ್​ ಗ್ರೌಂಡ್​ನಲ್ಲೇ ಕೋಪ ಮಾಡಿಕೊಂಡು ವಿರಾಟ್ ಬಳಿ ಕೂಗಾಡಿದ್ದಾರೆ. ಇದೀಗ ಈ ಜಗಳ ಸದ್ಯ ಐಪಿಎಲ್​ನ್ನು ಇನ್ನೊಂದು ಹಂತಕ್ಕೆ ಕರೆದೊಯ್ದಿದೆ. ಅಲ್ಲದೇ ಅಭಿಮಾನಿಗಳು ಉಭಯ ತಂಡಗಳ ಮತ್ತೆ ಯಾವಾಗ ಮುಖಾಮುಖಿ ಆಗಲಿದೆ ಎಂದು ಕಾತುರರಾಗಿದ್ದಾರೆ.

First published:

  • 18

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಈ ಬಾರಿ ಐಪಿಎಲ್​ನಲ್ಲಿ ಯಾವುದು ಬೆಸ್ಟ್​ ಮ್ಯಾಚ್​ ಎಂದು ಕೇಳಿದರೆ ಪ್ರತಿಯೊಬ್ಬರೂ ಹೇಳುವ ಏಕೈಕ ಉತ್ತರವೆಂದರೆ ಅದು ಆರ್​ಸಿಬಿ ಮತ್ತು ಲಕ್ನೋ ನಡುವಿನ ಹಣಾಹಣಿ ಎಂದು. ಹೌದು, ಈ ಪಂದ್ಯದಲ್ಲಿ ಆಟಕ್ಕಿಂತ ಹೆಚ್ಚು ಹೈಲೇಟ್​ ಆಗಿದ್ದು, ಕೊಹ್ಲಿ ಮತ್ತು ಗಂಭೀರ್​ ನಡುವಿನ ಜಗಳ.

    MORE
    GALLERIES

  • 28

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಪಂದ್ಯ ಮುಗಿದ ಬಳಿಕ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

    MORE
    GALLERIES

  • 38

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಹೀಗಾಗಿ ಕಳೆದೆರಡು ದಿನದಿಂದ ಈ ಪಂದ್ಯದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರುತ್ತಿದೆ. ಅಲ್ಲದೇ ಉಭಯ ತಂಡಗಳ ಅಭಿಮಾನಿಗಳು ಮತ್ತೆ ಯಾವಾಗ ಆರ್​ಸಿಬಿ ಮತ್ತು ಲಕ್ನೋ ತಂಡಗಳು ಮುಖಾಮುಖಿ ಆಗಲಿದೆ ಎಂದು ಕಾತುರರಾಗಿದ್ದಾರೆ.

    MORE
    GALLERIES

  • 48

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಇದಕ್ಕೆ ಇಲ್ಲಿದೆ ನೋಡಿ ಉತ್ತರ. ಸದ್ಯ ಲೀಗ್​ ಹಂತದಲ್ಲಿ ಲಕ್ನೋ ಮತ್ತು ಆರ್​ಸಿಬಿ 2 ಬಾರಿ ಮುಖಾಮುಖಿ ಆಗಿದೆ. ಹೀಗಾಗಿ ಈ ವರ್ಷ ಉಭಯ ತಂಡಗಳು ಲೀಗ್​ ಹಂತದಲ್ಲಿ ಮತ್ತೊಮ್ಮೆ ಮುಖಾಮುಖಿ ಆಗುವುದಿಲ್ಲ. ಆದರೂ ಈ ವರ್ಷವೇ ಮತ್ತೆ ಸೆಣಸಾಡಲು ಒಂದು ಅವಕಾಶವಿದೆ.

    MORE
    GALLERIES

  • 58

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಹೌದು, ಆರ್​ಸಿಬಿ ಮತ್ತು ಲಕ್ನೋ ತಂಡಗಳು ತಲಾ 5 ಪಂದ್ಯಗಳನ್ನು ಗೆದ್ದು 10 ಅಂಕವನ್ನು ಹೊಂದಿದೆ. ಅಲ್ಲದೇ ಲಕ್ನೋ ತಂಡ ನೆಟ್​ರನ್​ ರೇಟ್​ ಮೇಲೆ ಐಪಿಎಲ್​ನ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಮತ್ತು ಆರ್​ಸಿಬಿ ತಂಡ 5ನೇ ಸ್ಥಾನದಲ್ಲಿದೆ.

    MORE
    GALLERIES

  • 68

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಇದರಿಮದಾಗಿ ಇಬ್ಬರ ಮುಖಾಮುಖಿಗೆ ಪ್ಲೇಆಫ್​ವರೆಗೂ ಕಾಯಬೇಕು. ಅಂದರೆ ಆರ್​ಸಿಬಿ ಹಾಗೂ ಲಕ್ನೋ ತಂಡಗಳು ಮುಂಬರಲಿರುವ ಪಂದ್ಯಗಳನ್ನು ಗೆದ್ದು, ಟಾಪ್​ 4ರಲ್ಲಿ ಸ್ಥಾನ ಪಡೆಯಬೇಕು. ಆಗ ಉಭಯ ತಂಡಗಳು ಕ್ವಾಲಿಫೈಯರ್ ಅಥವಾ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿ ಆಗಬಹುದು.

    MORE
    GALLERIES

  • 78

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಇದರಲ್ಲಿಯೂ ಮಿಸ್​ ಆದರೆ, ಕೊನೆಯದಾಗಿ ಆರ್​ಸಿಬಿ ಮತ್ತು ಲಕ್ನೋ ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಬಹುದು. ಆದರೆ, ಇದಕ್ಕೆ ಮೊದಲಿಗೆ ಈ ಎರಡೂ ತಂಡಗಳು ಮುಂದಿನ ಎಲ್ಲಾ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕಿದೆ.

    MORE
    GALLERIES

  • 88

    RCB vs LSG: ಮತ್ತೆ ಆರ್​ಸಿಬಿ-ಲಕ್ನೋ ಮುಖಾಮುಖಿ, ಎಲ್ಲಿ? ಯಾವಾಗ?

    ಒಮ್ಮೆ ಏನಾದರೂ ಇದು ಸಂಭವಿಸಿದರೆ ಸೆಮೀಸ್​ ಮತ್ತು ಪೈನಲ್​ ಪಂದ್ಯ ಯಾವಾಗ? ಎಲ್ಲಿ? ನೋಡೋಣ ಬನ್ನಿ. ಮೇ 23 – ಕ್ವಾಲಿಫೈಯರ್ 1 ಪಂದ್ಯ – ಚೆನ್ನೈ, ಮೇ 24 – ಎಲಿಮಿನೇಟರ್ ಪಂದ್ಯ – ಚೆನ್ನೈ, ಮೇ 26 – ಕ್ವಾಲಿಫೈಯರ್ 2 ಪಂದ್ಯ – ಅಹಮದಾಬಾದ್, ಮೇ 28 – ಫೈನಲ್ -ಕ್ವಾಲಿಫೈಯರ್ 1 ರ ವಿಜೇತರು vs ಕ್ವಾಲಿಫೈಯರ್ 2 ರ ವಿಜೇತರ ನಡುವೆ- ಅಹಮದಾಬಾದ್​ನಲ್ಲಿ ನಡೆಯಲಿದೆ.

    MORE
    GALLERIES