LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

KL Rahul: ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡದ ನಾಯಕ ಕೆಎಲ್​ ರಾಹುಲ್​ ಗಾಯಗೊಂಡಿದ್ದು, ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

First published:

  • 18

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಐಪಿಎಲ್ 2023ರ 43ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಲಕ್ನೋಗೆ ದೊಡ್ಡ ಆಘಾತ ಎದುರಾಗಿದೆ. ನಾಯಕ ಕೆಎಲ್​ ರಾಹುಲ್​ ಇಂಜುರಿಗೆ ತುತ್ತಾಗಿದ್ದಾರೆ.

    MORE
    GALLERIES

  • 28

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಹೌದು, ಮಾರ್ಕಸ್ ಸ್ಟೊಯಿನಿಸ್ ಎರಡನೇ ಓವರ್ ಬೌಲ್ ಮಾಡಿದರು. ಅವರ ಓವರ್‌ನ ಕೊನೆಯ ಎಸೆತದಲ್ಲಿ, ಫಾಫ್ ಡು ಪ್ಲೆಸಿಸ್ ಕವರ್‌ಗಳ ದಿಕ್ಕಿನಲ್ಲಿ ಶಾಟ್ ಬಾಲ್​ ಆಡಿದರು. ಚೆಂಡು ವೇಗವಾಗಿ ಬೌಂಡರಿಯತ್ತ ಸಾಗುತ್ತಿದ್ದು, ನಾಯಕ ಕೆಎಲ್ ರಾಹುಲ್ ತಡೆಯಲು ಪ್ರಯತ್ನಿಸಿದರು.

    MORE
    GALLERIES

  • 38

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಆದರೆ, ಚೆಂಡನ್ನು ತಲುಪುವ ಮೊದಲೇ ಅವರು ಸ್ನಾಯು ಸೆಳೆತಕ್ಕೆ ಒಳಗಾದರು. ಬಲಗಾಲಿನ ತೊಡೆಯ ಸ್ನಾಯುಗಳಲ್ಲಿ ಸೆಳೆತ ಇದ್ದಂತೆ ಕಾಣಿಸಿಕೊಂಡಿತು. ಚೆಂಡನ್ನು ಬೌಂಡರಿ ದಾಟದಂತೆ ರಕ್ಷಿಸುವ ಮುನ್ನವೇ ನೆಲದ ಮೇಲೆ ಬಿದ್ದು ನೋವಿನಿಂದ ನರಳಾಡಿದರು.

    MORE
    GALLERIES

  • 48

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಫಿಸಿಯೋ ಹಾಗೂ ಸಹ ಆಟಗಾರರು ತಕ್ಷಣ ಮೈದಾನ ಬಂದು ಕೆಎಲ್ ರಾಹುಲ್ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ರಾಹುಲ್ ಅವರು ತೀವ್ರ ನೋವಿನಲ್ಲಿದ್ದಂತೆ ಕಂಡುಬರುತ್ತಿದೆ. ಅವರು ಬಹಳ ಹೊತ್ತು ನೆಲದ ಮೇಲೆ ಮಲಗಿದ್ದರು.

    MORE
    GALLERIES

  • 58

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪತ್ನಿ ಅಥಿಯಾ ಶೆಟ್ಟಿ ತನ್ನ ಪತಿಗೆ ತೊಂದರೆ ನೀಡುವುದನ್ನು ಕಂಡು ಆತಂಕವಾದ ದೃಶ್ಯವೂ ಕಂಡುಬಂತು. ಇದಾದ ನಂತರ ಸಹ ಆಟಗಾರರು ಕೆಎಲ್ ರಾಹುಲ್ ಅವರನ್ನು ಎತ್ತಿಕೊಂಡು ಹೊರ ನಡೆದರು.

    MORE
    GALLERIES

  • 68

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಇದಾದ ಬಳಿಕ ಕೃನಾಲ್ ಪಾಂಡ್ಯ ತಂಡದ ಜವಾಬ್ದಾರಿ ವಹಿಸಿಕೊಂಡರು. ಭಾರತ ಮುಂದಿನ ತಿಂಗಳು ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಡಬೇಕಾಗಿದ್ದು, ಕೆಎಲ್ ರಾಹುಲ್ ಅವರನ್ನು 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 78

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ಅವರು ವಿಕೆಟ್ ಕೀಪಿಂಗ್‌ಗೆ ಆಯ್ಕೆಯಾಗಿದ್ದಾರೆ. ಆದರೆ, ಅವರು ಗಾಯಗೊಂಡಿರುವುದು ಮತ್ತು ಗಾಯದ ವೇಳೆ ಅವರ ನೋವವನ್ನು ಅನುಭವಿಸಿದ್ದನ್ನು ನೋಡಿದರೆ ಈ ಬಾರಿ ಐಪಿಎಲ್​ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿ ಕಂಡುಬರುತ್ತಿದೆ.

    MORE
    GALLERIES

  • 88

    LSG vs RCB: ಆರ್​ಸಿಬಿ ಪಂದ್ಯದ ವೇಳೆ ಗಾಯಗೊಂಡ ಕೆಎಲ್ ರಾಹುಲ್​, ಐಪಿಎಲ್​ನಿಂದ ಔಟ್​?

    ಲಕ್ನೋ ಸೂಪರ್​ ಜೈಂಟ್ಸ್​ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (WK), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್.

    MORE
    GALLERIES