RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

RCB vs DC: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20ಯಲ್ಲಿ ಚೇಸಿಂಗ್ ತಂಡ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡುತ್ತಾರೆ.

First published:

  • 17

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಐಪಿಎಲ್ 16ನೇ ಆವೃತ್ತಿಯ 20ನೇ ಪಂದ್ಯದಲ್ಲಿ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇಂದು ಸೆಣಸಾಡಲಿದೆ. ಬೆಂಗಳೂರಿನಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಟಾಸ್​ ಮತ್ತು 3:30ಕ್ಕೆ ಪಂದ್ಯ ಆರಂಭವಾಗಲಿದೆ.

    MORE
    GALLERIES

  • 27

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಈಗಾಗಲೇ ಸತತ 2ನ ಸೋಲಿನ ಬಳಿಕ ಜಯದ ನಿರೀಕ್ಷೆಯಲ್ಲಿ ಆರ್​ಸಿಬಿ ತಂಡ ಇದ್ದರೆ, ಇತ್ತ ಡೆಲ್ಲಿ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಹಾಗಿದ್ದರೆ ಉಭಯ ತಂಡಗಳಲ್ಲಿ ಯಾವ ತಂಡ ಬಲಿಷ್ಠವಾಗಿದೆ? ಪಿಚ್​ ಯಾರಿಗೆ ಸಹಾರಿ ಎಂದು ನೋಡೋಣ ಬನ್ನಿ.

    MORE
    GALLERIES

  • 37

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಡೆಲ್ಲಿ ಮತ್ತು ಬೆಂಗಳೂರು ತಂಡಗಳು ಈವರೆಗೆ ಒಟ್ಟು 29 ಬಾರಿ ಮುಖಾಮುಖಿಗಳಾಗಿವೆ. RCB ತಂಡ 18 ಪಂದ್ಯಗಳನ್ನು ಗೆದ್ದಿದೆ ಮತ್ತು DC ಒಂದು ಪಂದ್ಯವನ್ನು ಮಳೆಯಿಂದ ರದ್ದಾಗಿತ್ತು. 10 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ದಾಖಲಿಸಿದೆ. ಆದರೆ ಈ ಬಾರಿ ಡೆಲ್ಲಿ ತಂಡಕ್ಕಿಂತ ಆರ್​ಸಿಬಿ ತಂಡ ಹೆಚ್ಚು ಬಲಿಷ್ಠವಾಗಿ ಕಾಣುತ್ತಿದೆ.

    MORE
    GALLERIES

  • 47

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಇನ್ನು, ಮುಖ್ಯವಾಗಿ ಪಿಚ್​ ರಿಪೋರ್ಟ್​ ನೋಡುವುದಾದರೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ, ಸೀಮಿತ ಓವರ್‌ಗಳ ಸ್ವರೂಪದಲ್ಲಿ ಬ್ಯಾಟಿಂಗ್ ಸ್ನೇಹಿ ಎಂದು ಕರೆಯಲಾಗುತ್ತದೆ. ಇದು ಬ್ಯಾಟರ್‌ಗಳ ಸ್ವರ್ಗ ಮತ್ತು ಬೌಲರ್‌ಗಳ ದುಃಸ್ವಪ್ನವಾದ ಮೈದಾನ ಎಂದು ಹೇಳಲಾಗುತ್ತದೆ.

    MORE
    GALLERIES

  • 57

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಆದರೆ ಇತ್ತೀಚೆಗೆ ವಿಕೆಟ್‌ಗೆ ಕಪ್ಪು ಮಣ್ಣನ್ನು ಬಳಸಲಾಗುತ್ತಿದ್ದು, ವಿಕೆಟ್‌ಗಳು ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20ಯಲ್ಲಿ ಚೇಸಿಂಗ್ ತಂಡ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಹೀಗಾಗಿ ಟಾಸ್​ ಗೆದ್ದ ನಾಯಕ ಮೊದಲು ಬೌಲಿಂಗ್​ ಆಯ್ಕೆ ಮಾಡುತ್ತಾರೆ.

    MORE
    GALLERIES

  • 67

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಚಿನ್ನಸ್ವಾಮಿ ಮೈದಾನದ ಐಪಿಎಲ್​ ದಾಖಲೆಗಳು: ಒಟ್ಟು 83 ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 33 ಬಾರಿ ಗೆದ್ದರೆ, 2ನೇ ಬ್ಯಾಟ್​ ಮಾಡಿದ ತಂಡ 46 ಬಾರಿ ಗೆದ್ದಿದೆ. 4 ಪಂದ್ಯಗಳ ಫಲಿತಾಂಶ ಬಂದಿಲ್ಲ. ಹೀಗಾಗಿ ಚೇಸಿಂಗ್​ ಟೀಂ ಗೆಲ್ಲುವ ಸಾಧ್ಯತೆ ಹೆಚ್ಚು ಕಳೆದ ಲಕ್ನೋ ಪಂದ್ಯದಲ್ಲಿಯೂ ಅದೇ ಆಗಿದೆ.

    MORE
    GALLERIES

  • 77

    RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?

    ಉಳಿದಂತೆ, ಹೆಚ್ಚಿನ ಸ್ಕೋರ್​ ಪಂದ್ಯ: 263/5 ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪುಣೆ ವಾರಿಯರ್ಸ್ 2013 ರಲ್ಲಿ. ಕಡಿಮೆ ಸ್ಕೋರ್​ ಪಂದ್ಯ: 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ 82 ಆಲೌಟ್. ಸರಾಸರಿ 1ನೇ ಇನಿಂಗ್ಸ್ ಸ್ಕೋರ್: 170,2ನೇ ಇನಿಂಗ್ಸ್ ಸ್ಕೋರ್: 154 ರನ್​ ಆಗಿದೆ.

    MORE
    GALLERIES