IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

IPL 2023 CSK vs RCB: ಚೆನ್ನೈ ಮತ್ತು ಆರ್‌ಸಿಬಿ (RCB vs CSK) ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಸೆಣಸಾಡುತ್ತಿದೆ. ಈಗಾಗಲೇ ಮೊದಲು ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಆರ್​ಸಿಬಿ ನಾಯಕ ಫಾಫ್​ ಡು ಪ್ಲೇಸಿಸ್​ ಆಲೋಚನೆಯನ್ನು ಚೆನ್ನೈ ಬ್ಯಾಟ್ಸ್​ಮನ್ಸ್ ತಲೆಕೆಳಗೆ ಮಾಡಿದರು.

First published:

  • 17

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಚೆನ್ನೈ ತಂಡ, 20 ಓವರ್​ನಲ್ಲಿ 6 ವಿಕೆಟ್​ ನಷ್ಟಕ್ಕೆ 226 ರನ್​ ಗಳಿಸಿತು. ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಪರ ಡೆವೊನ್ ಕಾನ್ವೆ 45 ಎಸೆತದಲ್ಲಿ 6 ಸಿಕ್ಸ್ ಮತ್ತು 6 ಫೋರ್​ ಮೂಲಕ ಬರೋಬ್ಬರಿ 83 ರನ್​ ಗಳಿಸಿದರು.

    MORE
    GALLERIES

  • 27

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಇದರ ನಡುವೆ ಸ್ಯಾಂಡಲ್​ವುಡ್​ ಸ್ಟಾರ್​ ನಟ ಶಿವರಾಜ್​ಕುಮಾರ್​ ಸಹ ಇಂದು ಚಿನ್ನಸ್ವಾಮಿ ಮೈದಾನಕ್ಕೆ ಆಗಮಿಸಿದ್ದು, ಈ ಮೂಲಕ ಸ್ಟೇಡಿಯಂನಿಂದ ಆರ್​ಸಿಬಿ ತಂಡಕ್ಕೆ ಸಪೋರ್ಟ್​ ಮಾಡಿದ್ದಾರೆ.

    MORE
    GALLERIES

  • 37

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರಾತ್ರಿ RCB ಗಾಗಿ ಹುರಿದುಂಬಿಸಲು ಉತ್ಸುಕನಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೊಸ್ಟ್ ಮಾಡಿದ್ದಾರೆ. ಈ ಮೂಲಕ ಆರ್​ಸಿಬಿ ತಂಡಕ್ಕೆ ಸಪೋರ್ಟ್​ ಮಾಡಿದ್ದಾರೆ.

    MORE
    GALLERIES

  • 47

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಇನ್ನು, ಇಂದಿನ ಪಂದ್ಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಅಭಿಮಾನಿಗಳಷ್ಟೇ ಚೆನ್ನೈ ಸೂಪರ್​ ಕಿಂಗ್ಸ್ ಅಭಿಮಾನಿಗಳೂ ಸಹ ನೆರೆದಿದ್ದರು. ಮೈದಾನದಲ್ಲಿ ಆರ್​ಸಿಬಿ ಜೊತೆ ಸಿಎಸ್​ಕೆ ಅಭಿಮಾನಿಗಳು ನೆರೆದಿದ್ದರು.

    MORE
    GALLERIES

  • 57

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಯಾವಾಗಲೂ ಚಿನ್ನಸ್ವಾಮಿ ಮೈದಾನ ಸಂಪೂರ್ಣ ಕೆಂಪು ಬಣ್ಣದಿಂದ ಕಂಗೊಳಿಸುತ್ತಿತ್ತು. ಆದರೆ ಇಂದು ಮೈದಾನದಲ್ಲಿ ಕೆಂಪು ಜೊತೆಗೆ ಹಳದಿ ಬಣ್ಣವೂ ರಾರಾಜಿಸುತ್ತಿತ್ತು. ಸುಮಾರು 50-50 ಎಂಬಂತೆ ಎರಡೂ ತಂಡಗಳ ಅಭಿಮಾನಿಗಳು ಮೈದಾನದಲ್ಲಿ ನೆರೆದಿದ್ದರು.

    MORE
    GALLERIES

  • 67

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಅದರಲ್ಲಿಯೂ ಕೊನೆಯ ಓವರ್​ನಲ್ಲಿ ಕ್ರೀಸ್​ಗೆ ಬಂದ ಧೋನಿ ಕೇವಲ 1 ರನ್​ ಗಳಿಸಿದರು. ಆದರೂ ಸಂಪೂರ್ಣ ಮೈದಾನದಲ್ಲಿ ಧೋನಿ...ಧೋನಿ ಎಂಬ ಕೂಗು ಕೇಳಿಬಂದಿತ್ತು. ಈ ವೇಳೆ ಜೀಯೋ ಸಿನಿಮಾದಲ್ಲಿ ಬರೋಬ್ಬರಿ 2.2 ಕೋಟಿ ಲೈವ್​ ವೀಕ್ಷಣೆ ಹೊಂದಿತ್ತು.

    MORE
    GALLERIES

  • 77

    IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್‌ ಮಾಡೋಕೆ ಬಂದ್ರು ಶಿವಣ್ಣ

    ಇದರ ನಡುವೆ ಓರ್ವ ಧೋನಿ ಅಭಿಮಾನಿ ಇಂದಿನ ಪಂದ್ಯವನ್ನು ಹಾಗೂ ಮಹೇಂದ್ರ ಸಿಂಗ್​ ಧೋನಿ ಅವರನ್ನು ನೋಡಲು ನ್ಯೂಯಾರ್ಕ್​ನಿಂದ ಬಂದಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಅಭಿಮಾನಿಗಳಷ್ಟೇ ಸಿಎಸ್​ಕೆ ಅಭಿಮಾನಿಗಳೂ ಸೇರುವ ಮೂಲಕ ಪಂದ್ಯದ ರೋಚಕತೆಯನ್ನು ಹೆಚ್ಚಿಸಿದ್ದಾರೆ.

    MORE
    GALLERIES