RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

CSK vs RCB: ಚೆನ್ನೈ ಮತ್ತು ಆರ್​ಸಿಬಿ ಪಂದ್ಯವು ಐಪಿಎಲ್​ನಲ್ಲಿ ಮೆಗಾ ಮ್ಯಾಚ್​ ಎಂಬಂತೆ ಬಿಂಬಿಸಲಾಗಿದೆ. ಪ್ರತಿ ಬಾರಿಯೂ ಈ ಪಂದ್ಯವು ಒಂದಲ್ಲಾ ಒಂದು ದಾಖಲೆಗಳಿಗೆ ಸಾಕ್ಷಿ ಆಗುತ್ತಲೇ ಇರುತ್ತದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಉಭಯ ತಂಡಗಳಲ್ಲಿ ಧೋನಿ ಮತ್ತು ಕೊಹ್ಲಿ ಇರುವುದು.

First published:

  • 18

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಐಪಿಎಲ್​ನಲ್ಲಿ ಬಹುನಿರೀಕ್ಷಿತ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಆರ್​ಸಿಬಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳು ಏಪ್ರಿಲ್​ 17ರಂದು ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರರಾಗಿದ್ದಾರೆ.

    MORE
    GALLERIES

  • 28

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಪಂದ್ಯವು ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ. ಅದಕ್ಕೂ ಅರ್ಧ ಗಂಟೆ ಮೊದಲು 7 ಗಂಟೆಗೆ ಪಂದ್ಯದ ಟಾಸ್​ ನಡೆಯಲಿದ್ದು, ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್​ ಸ್ಟ್ರೀಮಿಂಗ್​ ನೋಡಬಹುದು.

    MORE
    GALLERIES

  • 38

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಚೆನ್ನೈ ಮತ್ತು ಆರ್​ಸಿಬಿ ಪಂದ್ಯವು ಐಪಿಎಲ್​ನಲ್ಲಿ ಮೆಗಾ ಮ್ಯಾಚ್​ ಎಂಬಂತೆ ಬಿಂಬಿಸಲಾಗಿದೆ. ಪ್ರತಿ ಬಾರಿಯೂ ಈ ಪಂದ್ಯವು ಒಂದಲ್ಲಾ ಒಂದು ದಾಖಲೆಗಳಿಗೆ ಸಾಕ್ಷಿ ಆಗುತ್ತಲೇ ಇರುತ್ತದೆ. ಅದಕ್ಕೆ ಮುಖ್ಯ ಕಾರಣ ಎಂದರೆ ಉಭಯ ತಂಡಗಳಲ್ಲಿ ಧೋನಿ ಮತ್ತು ಕೊಹ್ಲಿ ಇರುವುದು.

    MORE
    GALLERIES

  • 48

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಹೌದು, ಚೆನ್ನೈ ತಂಡದ ನಾಯಕನಾಗಿ ಧೋನಿ ಹಾಗೂ ಆರ್​ಸಿಬಿ ತಂಡದಲ್ಲಿ ವಿರಾಟ್​ ಕೊಹ್ಲಿ ಇದ್ದಾರೆ. ಇವರಿಬ್ಬರನ್ನೂ ಕ್ರಿಕೆಟ್​ ಲೋಕದಲ್ಲಿ ಗುರು-ಶಿಷ್ಯರು ಎಂದೇ ಕರೆಯಲಾಗುತ್ತದೆ. ಇಬ್ಬರೂ ಒಳ್ಳೆಯ ಸ್ನೇಹಿತರೂ ಸಹ ಹೌದು.

    MORE
    GALLERIES

  • 58

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಇವರಿಬ್ಬರನ್ನು ಇಷ್ಟು ವರ್ಷಗಳ ಕಾಲ ಅಭಿಮಾನಿಗಳು ಅದೆಷ್ಟೋ ಪಂದ್ಯಗಳಲ್ಲಿ ಒಟ್ಟಿಗೆ ಮೈದಾನದಲ್ಲಿ ನೋಡಿರಬಹದು. ಆದರೆ, ಇದೀಗ ಏಪ್ರಿಲ್​ 17ರ ಪಂದ್ಯದ ಬಳಿಕ ಇವರಿಬ್ಬರನ್ನು ಒಟ್ಟಿಗೆ ಮತ್ತೆ ಮೈದಾನದಲ್ಲಿ ನೋಡಲು ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

    MORE
    GALLERIES

  • 68

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಏಕೆಂದರೆ, ಧೋನಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದು, ಈ ಬಾರಿ ಐಪಿಎಲ್​ ಅವರ ಕೊನೆಯ ಸೀಸನ್​ ಎನ್ನಲಾಗುತ್ತಿದೆ. ಅಲ್ಲದೇ ಚೆನ್ನೈ ಮತ್ತು ಆರ್​ಸಿಬಿ ನಡುವೆ ಈ ಬಾರಿ ಲೀಗ್​ ಹಂತದಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಆಯೋಜಿಸಲಾಗಿದೆ.

    MORE
    GALLERIES

  • 78

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಹೀಗಾಗಿ ಈ ಪಂದ್ಯದ ಬಳಿಕ ಈ ಇಬ್ಬರು ಲೆಜೆಂಡರಿ ಆಟಗಾರರು ಮತ್ತೆ ಒಟ್ಟಿಗೆ ಮೈದಾನದಲ್ಲಿ ಕಾಣಸಿಗುವುದು ಅನುಮಾನವಾಗಿದೆ. ಏನಾದರೂ ಈ ಐಪಿಎಲ್ 16ನೇ​ ಸೀಸನ್​ನಲ್ಲಿ ಚೆನ್ನೈ ಮತ್ತು ಆರ್​ಸಿಬಿ ತಂಡಗಳು ಫೈನಲ್​ ಪ್ರವೇಶಿಸಿದರೆ ಮಾತ್ರ ಮತ್ತೊಮ್ಮೆ ಎದುರಾಗಲಿದೆ. ಇಲ್ಲವಾದ್ದಲ್ಲಿ ಅಭಿಮಾನಿಗಳಿಗೆ ಇವರಿಬ್ಬರನ್ನು ಒಟ್ಟಿಗೆ ನೋಡಲು ಈ ಪಂದ್ಯವೇ ಕೊನೆಯಾಗಲಿದೆ.

    MORE
    GALLERIES

  • 88

    RCB vs CSK: ಚೆನ್ನೈ-ಆರ್​ಸಿಬಿ ಮ್ಯಾಚ್​ ಮಿಸ್​ ಮಾಡದೇ ನೋಡಿ, ಧೋನಿ-ಕೊಹ್ಲಿ ಸೆಣಸಾಡೋದು ಇದೇ ಲಾಸ್ಟ್!

    ಹೀಗಾಗಿ ಧೋನಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಮಿಸ್​ ಮಾಡದೇ ಈ ಪಂದ್ಯವನ್ನು ನೋಡಿ ಎಂಜಾಯ್​ ಮಾಡಬಹುದಾದ ಕೊನೆ ಅವಕಾಶ ಇದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

    MORE
    GALLERIES