ಐಪಿಎಲ್ ಲೀಗ್ ಹಂತದಲ್ಲಿ ಏಪ್ರಿಲ್ 17 ರಂದು ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ CSK ನಾಯಕ ಎಂಎಸ್ ಧೋನಿ 17 ಎಸೆತಗಳಲ್ಲಿ ಅಜೇಯ 32 ರನ್ ಗಳಿಸಿದರು. ಆದರೆ ಅವರು ತಮ್ಮ ತಂಡವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಏನಾದರೂ ಧೋನಿ ಆರ್‌ಸಿಬಿ ಪಂದ್ಯದಿಂದ ಹೊರಗುಳಿದರೆ, ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ನಾಯಕತ್ವ ನೀಡುವ ಸಾಧ್ಯತೆ ಇದೆ. ಪ್ರಸಕ್ತ ಋತುವಿನಲ್ಲಿ ರಹಾನೆ ಅದ್ಭುತವಾಗಿ ಆಡುತ್ತಿದ್ದಾರೆ. 34ರ ಹರೆಯದ ರಹಾನೆ ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಮೂಲಕ ತಮ್ಮ ತಂಡಕ್ಕೆ ಪ್ರಸಕ್ತ ಋತುವಿನಲ್ಲಿ ಎರಡನೇ ಗೆಲುವು ತಂದುಕೊಟ್ಟರು. ರಹಾನೆ ಮುಂಬೈ ವಿರುದ್ಧ 225.92 ಸ್ಟ್ರೈಕ್ ರೇಟ್‌ನೊಂದಿಗೆ ರನ್‌ಗಳ ಮಹಾಪೂರವನ್ನೇ ಹರಿಸಿದರು. ಅವರು 27 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ 61 ರನ್ ಗಳಿಸಿದ್ದರು.
ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಅವರು ಸಿಎಸ್‌ಕೆ ನಾಯಕರಾಗಬಹುದು. ರಹಾನೆ ನಾಯಕತ್ವದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅವರು ಒಟ್ಟು 229 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಂತರಾಷ್ಟ್ರೀಯ ಹಂತಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ ಅನುಭವ ಅವರಿಗಿದೆ. ಒತ್ತಡದಲ್ಲಿ ನಾಯಕನಾಗಿ ಹೇಗೆ ವರ್ತಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಗಾಯದ ಸಮಸ್ಯೆಯಿಂದ ಧೋನಿ ಮುಂಬರುವ ಪಂದ್ಯಗಳಲ್ಲಿ ಆಡಲು ಸಾಧ್ಯವಾಗದಿದ್ದರೆ ರಹಾನೆ ಸಿಎಸ್‌ಕೆಯನ್ನು ಮುನ್ನಡೆಸಬಹುದು.
ರವೀಂದ್ರ ಜಡೇಜಾ ಅವರು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ಕ್ಷೇತ್ರಗಳಲ್ಲಿ ಅದ್ಭುತ ಆಟಗಾರ. 34 ವರ್ಷದ ಜಡೇಜಾ 214 ಐಪಿಎಲ್ ಪಂದ್ಯಗಳ ಅನುಭವ ಹೊಂದಿದ್ದಾರೆ. ಅವರು ಐಪಿಎಲ್‌ನಲ್ಲಿ 2531 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಸ್ಟ್ರೈಕ್ ರೇಟ್ 127.57 ರಷ್ಟಿತ್ತು. ಬೌಲಿಂಗ್ ನಲ್ಲಿ ಜಡೇಜಾ 138 ವಿಕೆಟ್ ಕಬಳಿಸಿದ್ದಾರೆ. ಸಿಎಸ್‌ಕೆ ಜಡೇಜಾ ಅವರನ್ನು ಧೋನಿಯ ಉತ್ತರಾಧಿಕಾರಿಯಾಗಿ ನೋಡುತ್ತಿದೆ. ಐಪಿಎಲ್ 15ನೇ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ಜಡೇಜಾ ಸಿಎಸ್‌ಕೆ ನಾಯಕರಾಗಿದ್ದರು. ಆದರೆ ಆಗ ಜಡೇಜಾ ನಾಯಕತ್ವದಲ್ಲಿ ತಂಡ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ.