IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

IPL 2023 RCB: ಐಪಿಎಲ್​ನಿಂದ ಆರ್​ಸಿಬಿ ತಂಡ ಬರೋಬ್ಬರಿ 4 ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಓರ್ವ ಆಟಗಾರ ಮಾತ್ರ ತಡವಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.

First published:

 • 19

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಐಪಿಎಲ್ 2023ಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರತೆಯಿಂದ ಕಾಯುತ್ತಿದ್ದಾರೆ. ಅದರಲ್ಲಿಯೂ ಆರ್​ಸಿಬಿ ತಂಡದ ಪಂದ್ಯಕ್ಕಾಗಿ ಕೋಟ್ಯಾಂತರ ಅಭಿಮಾನಿಗಳು ಸಖತ್ ವೇಟ್​ ಮಾಡುತ್ತಿದ್ದಾರೆ ಎಂದರೂ ತಪ್ಪಾಗಲಾರದು. ಆದರೆ ಇದರ ನಡುವೆ ಐಪಿಎಲ್​ ಆರಂಭಕ್ಕೂ ಮುನ್ನ ಆರ್​ಸಿಬಿ ತಂಡಕ್ಕೆ ಗಾಯಾಳುಗಳ ಸಮಸ್ಯೆ ಹೆಚ್ಚಿದೆ.

  MORE
  GALLERIES

 • 29

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಹೌದು, ಈ ಬಾರಿ ಐಪಿಎಲ್​ನಿಂದ ಆರ್​ಸಿಬಿ ತಂಡ ಬರೋಬ್ಬರಿ 4 ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಓರ್ವ ಆಟಗಾರ ಮಾತ್ರ ತಡವಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಹಾಗಿದ್ದರೆ ಈ ಬಾರಿ ಆರ್​ಸಿಬಿ ತಂಡದಿಂದ ದೂರ ಉಳಿಯಲಿರುವ ಆಟಗಾರರು ಯಾರೆಂದು ನೋಡೋಣ ಬನ್ನಿ.

  MORE
  GALLERIES

 • 39

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಆರ್​ಸಿಬಿ ತಂಡದ ಆರಂಭಿಕ ಐಪಿಎಲ್​ ಆರಂಭಿಕ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಪಾಟಿದಾರ್, ಹಿಮ್ಮಡಿ ಗಾಯದ ಕಾರಣ ಮುಂಬರುವ ಋತುವಿನ ಮೊದಲಾರ್ಧದಲ್ಲಿ ಆಡುವುದು ಅನುಮಾನವಾಗಿದೆ. ಪಾಟಿದಾರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿಗೆ ಒಳಗಾಗಿದ್ದಾರೆ.

  MORE
  GALLERIES

 • 49

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಪಾಟಿದಾರ್ ವಾಪಸಾತಿಗೆ ಯಾವುದೇ ನಿರ್ದಿಷ್ಟ ದಿನಾಂಕವನ್ನು ನೀಡಲಾಗಿಲ್ಲ. ವಿಶ್ರಾಂತಿಗೆ ಸೂಚಿಸಲಾಗಿದೆ. ರಜತ್ ಪಾಟಿದಾರ್ ಅವರಿಗೆ ಮುಂದಿನ ಮೂರು ವಾರಗಳ ಕಾಲ ವಿಶ್ರಾಂತಿ ನೀಡುವಂತೆ ಸೂಚಿಸಲಾಗಿದೆ.

  MORE
  GALLERIES

 • 59

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಇನ್ನು, ಜೋಶ್ ಹ್ಯಾಜಲ್‌ವುಡ್ ಪ್ರಸ್ತುತ ಅಕಿಲ್ಸ್ ಸ್ನಾಯುರಜ್ಜು ಉರಿಯೂತದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಹ್ಯಾಜಲ್‌ವುಡ್ ಈ ಬಾರಿ ಐಪಿಎಲ್​ ಆಡುವುದು ಅನುಮಾನವಾಗಿದೆ. ಹೀಗಾಗಿ ಇವರು ಬಾರ್ಡರ್-ಗವಾಸ್ಕರ್ ಟ್ರೋಫಿ ಹಾಗೂ ODI ಸರಣಿಯನ್ನು ಸಹ ಕಳೆದುಕೊಂಡಿದ್ದರು. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಹೇಜಲ್‌ವುಡ್ ಅನ್ನು RCB 7.75 ಕೋಟಿಗೆ ಖರೀದಿಸಿತ್ತು.

  MORE
  GALLERIES

 • 69

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಆರ್​ಸಿಬಿ ತಂಡದ ಮತ್ತೋರ್ವ ಪ್ರಮುಖ ಆಟಗಾರ ವನಿಂದು ಹಸರಂಗ ಆರಂಭಿಕ ಪಂದ್ಯಗಳಿಗೆ ಲಭ್ಯ ಇರುವುದಿಲ್ಲ. ಶ್ರೀಲಂಕಾ ಸದ್ಯ ನ್ಯೂಜಿಲೆಂಡ್ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡುತ್ತಿದೆ. ಹೀಗಾಗಿ ಹಸರಂಗ ಏಪ್ರಿಲ್ 2 ರೊಳಗೆ ತಂಡವನ್ನು ಸೇರಿಕೊಳ್ಳುವುದು ಅನುಮಾನವಾಗಿದೆ. ಹೀಗಾಗಿ ಹಸರಂಗ ಸರಣಿ ಮುಗಿದ ಬಳಿಕ ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

  MORE
  GALLERIES

 • 79

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಆರ್​ಸಿಬಿ ತಂಡದ ಸ್ಟಾರ್​ ಆಲ್​ರೌಂಡರ್​ ಗ್ಲೆನ್ ಮ್ಯಾಕ್ಸ್​ವೆಲ್ ಸಹ ಕೆಲ ಪಂದ್ಯದಿಂದ ದೂರ ಉಳಿಯುವ ಸಾಧ್ಯತೆ ಇದೆ. ಅವರು ತಮ್ಮ ಫಿಟ್​ನೆಸ್ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ತಾನು ಸಂಪೂರ್ಣ ಫಿಟ್​ ಆಗಿಲ್ಲ ಎಂದಿದ್ದಾರೆ.

  MORE
  GALLERIES

 • 89

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಮ್ಯಾಕ್ಸಿ ಅವರ ಎಡಗಾಲಿನ ಗಾಯ ವಾಸಿಯಾಗಿದೆ. ಆದರೆ ಅವರು ಈವರೆಗೂ ಸಂಪೂರ್ಣ ಫಿಟ್‌ ಆಗಲು ಬರೋಬ್ಬರಿ 1 ತಿಂಗಳು ಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಾನು ಸಂಪೂರ್ಣ ಫಿಟ್​ ಆದ ಮೇಲೆಯೇ ಕಣಕ್ಕಿಳಿಯುತ್ತೇನೆ ಎಂದು ಗ್ಲೆನ್ ಮ್ಯಾಕ್ಸ್​ವೆಲ್ ತಿಳಿಸಿದ್ದಾರೆ.

  MORE
  GALLERIES

 • 99

  IPL 2023: ಆರ್​ಸಿಬಿಯಲ್ಲಿ ಹೆಚ್ಚಾಯ್ತು ಗಾಯಾಳುಗಳ ಸಮಸ್ಯೆ, ತಂಡದಿಂದ 5 ಸ್ಟಾರ್​​ ಪ್ಲೇಯರ್ಸ್​​ ಔಟ್​!

  ಫಾಫ್ ಡುಪ್ಲೆಸಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಗಾಯದ ಸಮಸ್ಯೆಯಿಂದ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ವಿಲ್​ ಜಾಕ್ಸ್​ ಅವರು ತಂಡದಿಂದ ಹೊರನಡೆದ ಹಿನ್ನಲೆ ಅವರ ಸ್ಥಾನಕ್ಕೆ ನ್ಯೂಜಿಲೆಂಡ್‌ನ ಸ್ಟಾರ್ ಆಲ್ರೌಂಡರ್ ಮಿಚೆಲ್ ಬ್ರಾಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

  MORE
  GALLERIES