ಅಲ್ಲದೆ, ಈ ಶತಕದೊಂದಿಗೆ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 2019 ರ ಐಪಿಎಲ್ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊಹ್ಲಿ ಕೊನೆಯ ಬಾರಿಗೆ 58 ಎಸೆತಗಳಲ್ಲಿ ಶತಕ ಗಳಿಸಿದ್ದರು. ಅಂದರೆ ಸುಮಾರು 4 ವರ್ಷಗಳ ನಂತರ ಕಿಂಗ್ ಕೊಹ್ಲಿ ಐಪಿಎಲ್ ಶತಕ ಬಾರಿಸಿದ್ದಾರೆ.