Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

ವಿಂಧ್ಯಾ ಅವರನ್ನು ವನಿಂದು ಹಸರಂಗ ಪ್ರೀತಿಸಿ ಮದುವೆಯಾಗಿದ್ದು, ಆದರೆ ಈ ವಿಚಾರ ಮದುವೆಗೂ ಮುನ್ನ ಎಲ್ಲಿಯೂ ಬಹಿರಂಗ ಆಗದಂತೆ ಇಬ್ಬರು ನೋಡಿಕೊಂಡಿದ್ದರು.

First published:

 • 18

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಶ್ರೀಲಂಕಾ ಕ್ರಿಕೆಟಿಗ ವನಿಂದು ಹಸರಂಗ ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್​​ ಆರಂಭಿಸಿದ್ದಾರೆ. ವಿಂಧ್ಯಾ ಎಂಬ ಯುವತಿಯೊಂದಿಗೆ ಮದುವೆಯಾಗುವ ಮೂಲಕ ಹಸರಂಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  MORE
  GALLERIES

 • 28

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಆಪ್ತ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುರುವಾರ ವನಿಂದು ಹಸರಂಗ ಹಾಗೂ ವಿಂಧ್ಯಾ ಜೋಡಿಯ ಮದುವೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಅಂದಹಾಗೆ, ವಿಂಧ್ಯಾ ಅವರನ್ನು ಹಸರಂಗ ಪ್ರೀತಿಸಿ ಮದುವೆಯಾಗಿದ್ದು, ಆದರೆ ಈ ವಿಚಾರ ಮದುವೆಗೂ ಮುನ್ನ ಎಲ್ಲಿಯೂ ಬಹಿರಂಗ ಆಗದಂತೆ ನೋಡಿಕೊಂಡಿದ್ದರು.

  MORE
  GALLERIES

 • 38

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ತಮ್ಮ ವಿವಾಹ ಕಾರ್ಯಕ್ರಮದ ಫೋಟೋಗಳನ್ನು ಆರ್​​ಸಿಬಿ ಆಲ್​ರೌಂಡರ್​ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ಸಖತ್ ವೈರಲ್​ ಆಗುತ್ತಿದೆ. ಜೋಡಿ ತುಂಬಾ ಚೆನ್ನಾಗಿದೆ ಅಂತ ಅಭಿಮಾನಿಗಳು ಕಾಮೆಂಟ್ ಮಾಡಿ ನೂತನ ದಂಪತಿಗೆ ಶುಭ ಕೋರುತ್ತಿದ್ದಾರೆ.

  MORE
  GALLERIES

 • 48

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಶ್ರೀಲಂಕಾ ತಂಡ ಸದ್ಯ ನ್ಯೂಜಿಲೆಂಡ್​ ಪ್ರವಾಸದಲ್ಲಿ ಬ್ಯುಸಿಯಾಗಿದೆ. ಟೆಸ್ಟ್​, ಏಕದಿನ ಹಾಗೂ ಟಿ20 ಸರಣಿ ಆಡಲು ಲಂಕಾ ಆಟಗಾರರು ನ್ಯೂಜಿಲೆಂಡ್​ಗೆ ತೆರಳಿದ್ದಾರೆ. ಇತ್ತ ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಸರಂಗ ಟೆಸ್ಟ್​ ಟೂರ್ನಿಯಿಂದ ದೂರವಾಗಿದ್ದಾರೆ.

  MORE
  GALLERIES

 • 58

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಇನ್ನು, ನ್ಯೂಜಿಲೆಂಡ್ ವಿರುದ್ಧದ ಸಿಮೀತ ಓವರ್​ಗಳ ಸರಣಿ ಆರಂಭವಾಗುವ ವೇಳೆಗೆ ಹಸರಂಗ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆ ಇದೆ. ಮಾರ್ಚ್​ 9ರಿಂದ ಶ್ರೀಲಂಕಾ-ನ್ಯೂಜಿಲೆಂಡ್​ ಟೆಸ್ಟ್​ ಸರಣಿ ಆರಂಭವಾಗಲಿದೆ.

  MORE
  GALLERIES

 • 68

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಉಳಿದಂತೆ ಮಾರ್ಚ್​25 ರಿಂದ 31ರ ವರೆಗೂ ಮೂರು ಏಕದಿನ ಪಂದ್ಯ, ಏಪ್ರಿಲ್​ 2ರಿಂದ 8ರ ಅವಧಿಯಲ್ಲಿ ಮೂರು ಟಿ20 ಪಂದ್ಯಗಳು ಜರುಗಲಿದೆ. ಇನ್ನು, ಹಸರಂಗ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡುತ್ತಿದ್ದು, 2023ರ ಟೂರ್ನಿಗೆ ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.

  MORE
  GALLERIES

 • 78

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  25 ವರ್ಷದ ಹಸರಂಗ ಶ್ರೀಲಂಕಾ ಪರ ಜಿಂಬಾಬ್ವೆ ವಿರುದ್ಧ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಪಾದಾರ್ಪಣೆ ಮಾಡಿದ್ದರು. ಇದುವರೆಗೂ 4 ಟೆಸ್ಟ್​, 37 ಏಕದಿನ ಹಾಗೂ 55 ಟಿ20 ಪಂದ್ಯಗಳನ್ನು ಹಸರಂಗ ಆಡಿದ್ದಾರೆ.

  MORE
  GALLERIES

 • 88

  Wanindu Hasaranga Marriage: ಆ ವಿಚಾರವನ್ನು ಗೌಪ್ಯವಾಗಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆರ್​ಸಿಬಿ ಸ್ಟಾರ್​ ಆಟಗಾರ; ಫೋಟೋಸ್ ವೈರಲ್​​​!

  ಟೆಸ್ಟ್​​ನಲ್ಲಿ 196 ರನ್​​ ಗಳಿಸಿ 4 ವಿಕೆಟ್​ ಪಡೆದುಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ 710 ರನ್ ಗಳಿಸಿ, 39 ವಿಕೆಟ್​ ಕಬಳಿಸಿದ್ದಾರೆ. ಟಿ ಮಾದರಿಯಲ್ಲಿ 503 ರನ್​​ಗಳೊಂದಿಗೆ 89 ವಿಕೆಟ್​ ಉರುಳಿಸಿದ್ದಾರೆ. ಐಪಿಎಲ್​​ನಲ್ಲಿ 18 ಪಂದ್ಯಗಳನ್ನು ಆಡಿದ್ದು, 39 ರನ್​​ ಗಳೊಂದಿಗೆ 26 ವಿಕೆಟ್​ ಪಡೆದು ಮಿಂಚಿದ್ದಾರೆ.

  MORE
  GALLERIES