ಬೆಂಗಳೂರು ಅಭಿಮಾನಿಗಳು ಪ್ರತಿ ಬಾರಿಯೂ ಕಪ್ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲಿರುತ್ತಾರೆ. ಇದುವರೆಗೆ ಮೂರು ಬಾರಿ ಫೈನಲ್ ತಲುಪಿರುವ ಆರ್ ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. 2009, 2011 ಮತ್ತು 2016ರಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ಬೆಂಗಳೂರು ಫೈನಲ್‌ನಲ್ಲಿ ಎಡವಿತ್ತು. ಅದಕ್ಕಾಗಿಯೇ ಕೆಲವರು ಈ ತಂಡವನ್ನು ಐಪಿಎಲ್‌ನ ದಕ್ಷಿಣ ಆಫ್ರಿಕಾ ತಂಡ ಎಂದು ಬಣ್ಣಿಸುತ್ತಾರೆ.
ಉಳಿದ ಆರ್‌ಸಿಬಿ ಆಟಗಾರರು ಇದ್ದರೂ ಇಲ್ಲದಿದ್ದರೂ ಒಂದೇ ಎಂಬಂತಾಗಿದೆ. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯಗಳಲ್ಲಿ ಆರ್‌ಸಿಬಿ ಸೋತಿತ್ತು. ಅದರಲ್ಲೂ ಕಳೆದ ಸೀಸನ್ ನಲ್ಲಿ ಫಿನಿಶರ್ ಪಾತ್ರ ಮಾಡಿದ್ದ ದಿನೇಶ್ ಕಾರ್ತಿಕ್ ಹೀನಾಯವಾಗಿ ವಿಫಲರಾಗಿದ್ದರು. ಅವರು 13 ಪಂದ್ಯಗಳಲ್ಲಿ ಒಂದೇ ಒಂದು ಗಮನಾರ್ಹ ಇನ್ನಿಂಗ್ಸ್‌ಗಳನ್ನು ಆಡಲಿಲ್ಲ. ಅವರು 11.67 ಸರಾಸರಿಯಲ್ಲಿ ಕೇವಲ 140 ರನ್ ಗಳಿಸಿದರು. ಅವರು ಮೂರು ಇನ್ನಿಂಗ್ಸ್‌ಗಳಲ್ಲಿ ಡಕ್ ಆದರು.
ಆರ್‌ಸಿಬಿಯ ಯುವ ಆಟಗಾರರಲ್ಲಿ ಅನುಜ್ ರಾವತ್ ಹೊರತುಪಡಿಸಿ ಬೇರೆ ಯಾರೂ ಉತ್ತಮ ಪ್ರದರ್ಶನ ನೀಡಿಲ್ಲ. ಶಹಬಾಜ್ ಅಹ್ಮದ್, ಸುಯಶ್ ಪ್ರಭುದೇಸಾಯಿ ಮತ್ತು ಮಹಿಪಾಲ್ ಲೊಮ್ರೋರ್ ಸಂಪೂರ್ಣ ವಿಫಲರಾದರು. ವನಿಂದು ಹಸರಂಗ ಕೂಡ ತಂಡಕ್ಕೆ ಹೊರೆಯಾದರು. ರಜತ್ ಪಾಟಿದಾರ್, ರೀಸ್ ಟೋಪ್ಲಿ ಮತ್ತು ಡೇವಿಡ್ ವಿಲ್ಲಿ ಅವರಂತಹ ಸ್ಟಾರ್ ಆಟಗಾರರು ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಆರ್‌ಸಿಬಿಗೆ ಹಿನ್ನಡೆಯಾಯಿತು.
ದಿನೇಶ್ ಕಾರ್ತಿಕ್, ಶೆಹಬಾಜ್ ಅಹಮದ್, ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಆಕಾಶ್ ದೀಪ್ ಅವರಂತಹ ಆಟಗಾರರನ್ನು ಆರ್‌ಸಿಬಿ ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಆದರೆ, ಮುಂದಿನ ವರ್ಷದ ಐಪಿಎಲ್ ಹರಾಜಿಗೂ ಮುನ್ನ ಈ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಆರ್‌ಸಿಬಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಜತೆಗೆ ಬೌಲಿಂಗ್ ವಿಭಾಗವನ್ನು ತಂಡ ಬಲಿಷ್ಠಗೊಳಿಸಬೇಕಿದೆ. ಫಾಫ್ ಡುಪ್ಲೆಸಿಸ್, ಮ್ಯಾಕ್ಸಿ, ಕೊಹ್ಲಿ ಮತ್ತು ಸಿರಾಜ್ ಹೊರತುಪಡಿಸಿ ಉಳಿದ ಆಟಗಾರರು ಹರಾಜಿನಲ್ಲಿ ಉಳಿಯುವ ಸಾಧ್ಯತೆಯಿದೆ.