Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

IPL 2023: ಇಂಡಿಯನ್ ಪ್ರೀಮಿಯರ್ ಲೀಗ್‌ನ 16ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಋತುವಿನಲ್ಲಿ ಮೊದಲ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ. ಮತ್ತೊಮ್ಮೆ ಕಿಂಗ್ ಕೊಹ್ಲಿ ಮೇಲೆ ತಂಡ ಭರವಸೆ ಇರಿಸಿದೆ. ಕೊಹ್ಲಿ ಸಿಡಿದೆದ್ದರೆ ತಂಡ ಕಪ್ ಗೆಲ್ಲುತ್ತದೆ ಎಂಬ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

First published:

  • 18

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ವಿರಾಟ್ ಕೊಹ್ಲಿ ಒಂದೇ ತಂಡಕ್ಕಾಗಿ ಅತಿ ಹೆಚ್ಚು ಪಂದ್ಯಗಳನ್ನು (223) ಆಡಿದ ಆಟಗಾರ. 2016ರಲ್ಲಿ ಐಪಿಎಲ್‌ನಲ್ಲಿ ಒಂದೇ ಋತುವಿನಲ್ಲಿ 973 ರನ್ ಗಳಿಸಿದ್ದರು. ಬೇರೆ ಯಾವುದೇ ಬ್ಯಾಟ್ಸ್‌ಮನ್‌ಗಳು ಒಂದು ಋತುವಿನಲ್ಲಿ 900 ರನ್‌ಗಳನ್ನು ಗಳಿಸಿಲ್ಲ. ಈ ರೀತಿ ಸಾಲು ಸಾಲು ದಾಖಲೆ ಮಾಡಿರುವ ಕೊಹ್ಲಿ ಈ ಬಾರಿ ಐಪಿಎಲ್​ನಲ್ಲಿಯೂ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

    MORE
    GALLERIES

  • 28

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಕಳೆದ ವರ್ಷದ ಏಷ್ಯಾಕಪ್‌ನೊಂದಿಗೆ ವಿರಾಟ್ ಕೊಹ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಐಪಿಎಲ್ 2023ರ ಸೀಸನ್‌ನಲ್ಲೂ ಅವರು ಅದೇ ಫಾರ್ಮ್ ಅನ್ನು ಮುಂದುವರೆಸಲಿದ್ದಾರೆ. ಈ ಬಾರಿಯ ಐಪಿಎಲ್ ಸೀಸನ್ ನಲ್ಲಿ 6 ದಾಖಲೆಗಳನ್ನು ಮುರಿಯಲು ಕಿಂಗ್ ಕೊಹ್ಲಿ ಸಿದ್ಧರಾಗಿದ್ದಾರೆ.

    MORE
    GALLERIES

  • 38

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ : ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇಲ್ಲಿಯವರೆಗೆ ಅವರು 223 ಪಂದ್ಯಗಳನ್ನು ಆಡಿದ್ದಾರೆ ಮತ್ತು 6,624 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂತರದ ಸ್ಥಾನದಲ್ಲಿ ಶಿಖರ್ ಧವನ್ ಇದ್ದಾರೆ. ಗಬ್ಬರ್ 6,244 ರನ್ ಗಳಿಸಿದ್ದಾರೆ. ಈ ಇಬ್ಬರು ಆಟಗಾರರು ಮಾತ್ರ ಐಪಿಎಲ್‌ನಲ್ಲಿ 6000ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ.

    MORE
    GALLERIES

  • 48

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    7000 ರನ್ ಮೈಲುಗಲ್ಲು: ಐಪಿಎಲ್‌ನಲ್ಲಿ 7,000 ರನ್ ಗಡಿ ದಾಟಲು ವಿರಾಟ್ ಕೊಹ್ಲಿಗೆ 376 ರನ್ ಅಗತ್ಯವಿದೆ. ಐಪಿಎಲ್ 2023ರಲ್ಲಿ ಕೊಹ್ಲಿ 376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7,000 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ (ಆರ್‌ಸಿಬಿ) ಗಾಗಿ ಕಳೆದ 15 ಸೀಸನ್‌ಗಳನ್ನು ಆಡಿದ ಏಕೈಕ ಆಟಗಾರ.

    MORE
    GALLERIES

  • 58

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ: ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿರಾಟ್ ಕೊಹ್ಲಿ ಅವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಲು ಎರಡು ಶತಕಗಳ ಅಗತ್ಯವಿದೆ. ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 6 ಶತಕಗಳನ್ನು ಬಾರಿಸಿದ್ದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋಸ್ ಬಟ್ಲರ್ ತಲಾ 5 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಅತಿ ಹೆಚ್ಚು ಕ್ಯಾಚ್​: ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಿಂಗ್ ಮಾತ್ರವಲ್ಲದೆ ಉತ್ತಮ ಫೀಲ್ಡರ್ ಕೂಡ. ಐಪಿಎಲ್‌ನಲ್ಲಿ ಫೀಲ್ಡರ್ ಆಗಿ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ 7 ಕ್ಯಾಚ್‌ಗಳ ಅಗತ್ಯವಿದೆ. ಪ್ರಸ್ತುತ ಸುರೇಶ್ ರೈನಾ (109) ಮತ್ತು ಕೀರನ್ ಪೊಲಾರ್ಡ್ (103) ಈ ಸಾಧನೆ ಮಾಡಿದ ಆಟಗಾರರಾಗಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಕೊಹ್ಲಿಗಿಂತ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಏಕೈಕ ಆಟಗಾರ ರೋಹಿತ್ ಶರ್ಮಾ (94 ಕ್ಯಾಚ್‌ಗಳು). ಶಿಖರ್ ಧವನ್ (92 ಕ್ಯಾಚ್) ನಂತರದ ಸ್ಥಾನದಲ್ಲಿದ್ದಾರೆ.

    MORE
    GALLERIES

  • 78

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಐಪಿಎಲ್‌ನಲ್ಲಿ 50+ ಸ್ಕೋರ್: ವಿರಾಟ್ ಕೊಹ್ಲಿ ಇಲ್ಲಿಯವರೆಗೆ 49 ಅರ್ಧಶತಕ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 59 ಬಾರಿ ಈ ಸಾಧನೆ ಮಾಡಿದ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಗೆ ಸರಿಸಮನಾಗಿ ಶಿಖರ್ ಧವನ್ ಇದ್ದಾರೆ. ಈ ಋತುವಿನಲ್ಲಿ ಶಿಖರ್ ಅವರನ್ನು ಮೀರಿಸುವ ಅವಕಾಶ ಕೊಹ್ಲಿಗಿದೆ.

    MORE
    GALLERIES

  • 88

    Virat Kohli: ಐಪಿಎನಲ್ಲಿ ಅಬ್ಬರಿಸೋಕೆ ರೆಡಿಯಾದ್ರು 'ರೆಕಾರ್ಡ್ ಕಿಂಗ್' ಕೊಹ್ಲಿ! 6 ದಾಖಲೆ ಬ್ರೇಕ್ ಮಾಡಿ 'ವಿರಾಟ್' ರೂಪ ತೋರಿಸೋದು ಪಕ್ಕಾ!

    ಫಿಂಚ್ ದಾಖಲೆ ಸನಿಹಕ್ಕೆ: ವಿರಾಟ್ ಕೊಹ್ಲಿ ಪ್ರಸ್ತುತ T20 ಇತಿಹಾಸದಲ್ಲಿ 360 ಪಂದ್ಯಗಳಲ್ಲಿ 40.88 ಸರಾಸರಿಯಲ್ಲಿ 11,326 ರನ್ ಗಳಿಸುವ ಮೂಲಕ ಐದನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯರನ್ ಫಿಂಚ್ (11,392) ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು 67 ರನ್ ಗಳಿಸಿದರೆ ಕೊಹ್ಲಿ ಫಿಂಚ್ ಅವರ ದಾಖಲೆ ಮುರಿಯಬಹುದು.

    MORE
    GALLERIES