IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

RCB 2023: ಐಪಿಎಲ್​ನಲ್ಲಿ ಈವರೆಗೆ ಅಂದರೆ ಕಳೆದ 16 ಸೀಸನ್​ನ ಲೆಕ್ಕ ನೋಡುವುದಾದರೆ, 200+ ರನ್​ ಗಳಸಿಯೂ ಅತೀ ಹೆಚ್ಚು ಬಾರಿ ಸೋತಿರುವ ದಾಖಲೆಯನ್ನು RCB ತಂಡ ಹೊಂದಿದೆ.

First published:

  • 17

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ರೋಚಕ ಗೆಲುವು ಸಾಧಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ 213 ರನ್‌ಗಳ ಗುರಿ ಬೆನ್ನತ್ತಿದ ಲಕ್ನೋ ಆರ್‌ಸಿಬಿ ವಿರುದ್ಧ ಭರ್ಜರಿ ಜಯ ಸಾಧಿಸಿತು.

    MORE
    GALLERIES

  • 27

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಈ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅರ್ಧಶತಕ ಗಳಿಸಿದರು. ಅದರಲ್ಲೂ ಕೊಹ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದರು. ಆದರೂ ತಂಡ ಬೌಲಿಂಗ್​ನಲ್ಲಿ ಎಡವಿತು. ಇದರಿಂದ ಮತ್ತೊಮ್ಮೆ 200+ ರನ್​ ಸಹ ಗಳಿಸಿದರೂ ಪಂದ್ಯ ಗೆಲ್ಲಲಾಗಲಿಲ್ಲ.

    MORE
    GALLERIES

  • 37

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಇನ್ನು, ಐಪಿಎಲ್​ನಲ್ಲಿ ಈವರೆಗೆ ಅಂದರೆ ಕಳೆದ 16 ಸೀಸನ್​ನ ಲೆಕ್ಕ ನೋಡುವುದಾದರೆ, 200+ ರನ್​ ಗಳಸಿಯೂ ಅತೀ ಹೆಚ್ಚು ಬಾರಿ ಸೋತಿರುವ ದಾಖಲೆಯನ್ನು RCB ತಂಡ ಹೊಂದಿದೆ. ಅಂದರೆ ಐಪಿಎಲ್​ನಲ್ಲಿ ಈವರೆಗೆ ಆರ್​ಸಿಬಿ ತಂಡ 200+ ರನ್​ ಗಳಿಸಿಯೂ 5 ಬಾರಿ ಸೋಲನ್ನಪ್ಪಿದೆ.

    MORE
    GALLERIES

  • 47

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಈ ಮೂಲಕ ಆರ್​ಸಿಬಿ ಅತಿ ಹೆಚ್ಚು ಬಾರಿ 200+ ರನ್​ ಗಳಿಸಿ ಸೋತ ಸೋತ ತಂಡವಾಗಿದೆ. ಆರ್​ಸಿಬಿ ಬಳಿಕ ಚೆನ್ನೈ ಸೂಪರ್​ ಕಿಂಗ್ಸ್ 3 ಬಾರಿ, ಪಂಜಾಬ್​ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ 2 ಬಾರಿ 200+ ರನ್​ ಗಳಿಸಿಯೂ ಸೋಲನ್ನಪ್ಪಿದೆ.

    MORE
    GALLERIES

  • 57

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಹೀಗಾಗಿ ಆರ್​ಸಿಬಿ ತಂಡಕ್ಕೆ 200 ರನ್​ ಗಳಿಸಿಯೂ ಸೋತಿರುವ ಕಾರಣ, ತಂಡಕ್ಕೆ 200ರ ಕಂಟಕ ಇದೆಯೇ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಅಂಕಿಅಂಶಗಳೇ ಆರ್​ಸಿಬಿ ತಂಡದ ಪ್ರದರ್ಶನದ ಬಗ್ಗೆ ಹೇಳುತ್ತಿದೆ.

    MORE
    GALLERIES

  • 67

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಏತನ್ಮಧ್ಯೆ, ಪಂಜಾಬ್ ಕಿಂಗ್ಸ್ 200+ ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಹೊಸ ದಾಖಲೆಯನ್ನು ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಪಂಜಾಬ್​ ತಂಡ 4 ಬಾರಿ 200ಕ್ಕೂ ಹೆಚ್ಚು ರನ್​ನ್ನು ಯಶಸ್ವಿಯಾಗಿ ಚೇಸ್​ ಮಾಡಿದೆ. ಬಳಿಕ 3 ಬಾರಿ ಚೇಸ್​ ಮಾಡುವ ಮೂಲಕ ಚೆನ್ನೈ ತಂಡ 2ನೇ ಸ್ಥಾನದಲ್ಲಿದೆ.

    MORE
    GALLERIES

  • 77

    IPL 2023: ಆರ್​ಸಿಬಿ ತಂಡಕ್ಕಿದ್ಯಾ 200ರ ಕಂಟಕ? ಐಪಿಎಲ್​ನಲ್ಲಿ ಬೇಡದ ದಾಖಲೆ ಬರೆದ ಫಾಫ್​ ಟೀಂ

    ಇದರ ನಡುವೆ RCB ಮತ್ತೊಂದು ಅನಗತ್ಯ ದಾಖಲೆಯನ್ನು ನಿರ್ಮಿಸದೆ. IPL ಪಂದ್ಯವೊಂದರಲ್ಲಿ ಅತಿ ಹೆಚ್ಚು ವೈಡ್‌ಗಳನ್ನು ಬಿಟ್ಟುಕೊಟ್ಟ ಕೆಟ್ಟ ದಾಖಲೆ ಆರ್​ಸಿಬಿ ಹೆಸರಿನಲ್ಲಿದೆ. ಆರ್​ಸಿಬಿ ತಂಡ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 21 ವೈಡ್​ ಬಾಲ್​ ಹಾಕಿ ಅಗ್ರಸ್ಥಾನದಲ್ಲಿದೆ.

    MORE
    GALLERIES