IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

RCB vs SRH: ಸನ್‌ರೈಸರ್ಸ್ ಹೈದರಾಬಾದ್ ತವರಿನಲ್ಲಿ ಕೊನೆಯ ಪಂದ್ಯಕ್ಕೆ ಸಿದ್ಧವಾಗಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ ಆಫ್ ಗುರಿಯಾಗಿ ನಿರ್ಣಾಯಕ ಯುದ್ಧಕ್ಕೆ ಸಿದ್ಧವಾಗಿದೆ.

First published:

  • 17

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೇ ಪ್ಲೇಆಫ್​ಗಾಗಿ ಈ ಪಂದ್ಯ ಸಾಕಷ್ಟು ಮಹತ್ವ ಪಡೆದಿದೆ.

    MORE
    GALLERIES

  • 27

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ಈಗಾಗಲೇ ಹೈದರಾಬಾದ್​ ತಂಡ ಪ್ಲೇಆಫ್​ ರೇಸ್​ನಿಂದ ಹೊರಬಿದ್ದಿದೆ. ಆದರೆ ಆರ್​ಸಿಬಿ ತಂಡ ಪ್ಲೇಆಫ್​ ರೇಸ್​ನಲ್ಲಿದ್ದು, ಇಂದಿನ ಪಂದ್ಯ ಆರ್​ಸಿಬಿಗೆ ಗೆಲ್ಲಲೇಬೇಕಿದೆ.

    MORE
    GALLERIES

  • 37

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ಉಪ್ಪಲ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಪೈಪೋಟಿ ನಡೆಸುತ್ತಿವೆ. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹಿಂದೆ ಸರಿದಿರುವ ಸನ್‌ರೈಸರ್ಸ್, ಇದನ್ನು ಗೆದ್ದು ಲೀಗ್​ಗೆ ಗುಡ್​ ಬೈ ಹೇಳಲು ಸಿದ್ಧವಾಗಿದೆ. 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿರುವ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲುವು ನಿರ್ಣಾಯಕವಾಗಿದೆ.

    MORE
    GALLERIES

  • 47

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ಆರ್​ಸಿಬಿ ಪ್ಲೇಆಫ್ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲು ಸನ್‌ರೈಸರ್ಸ್ ವಿರುದ್ಧದ ಬೃಹತ್ ಗೆಲುವು ಅತ್ಯಗತ್ಯ. ಈ ಪಂದ್ಯ ಮಾತ್ರವಲ್ಲದೆ ಅಂತಿಮ ಕದನದಲ್ಲೂ ಭರ್ಜರಿ ಜಯ ಸಾಧಿಸಬೇಕಿದೆ. ಎರಡು ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಪ್ಲೇಆಫ್‌ಗಾಗಿ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾಗಿದೆ.

    MORE
    GALLERIES

  • 57

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ಈ ಪಂದ್ಯದಲ್ಲಿ ಎಲ್ಲರ ದೃಷ್ಟಿ ವಿರಾಟ್ ಕೊಹ್ಲಿ ಮೇಲಿದೆ. ನಾಯಕ ಡುಪ್ಲೆಸಿಸ್ ಜೊತೆಗೆ ಆರ್‌ಸಿಬಿಯ ಅಗ್ರ ಸ್ಕೋರರ್ ವಿರಾಟ್ ಕಳೆದ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದರು. ಅವರು ತಮ್ಮ ಸ್ಟ್ರೈಕ್ ರೇಟ್ ಬಗ್ಗೆ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಉತ್ತಮ ದಾಖಲೆ ಹೊಂದಿರುವ ಉಪ್ಪಲ್ ಸ್ಟೇಡಿಯಂನಲ್ಲಿ ಅಬ್ಬರಿಸಲು ಸಿದ್ಧರಾಗಿದ್ದಾರೆ.

    MORE
    GALLERIES

  • 67

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ಮತ್ತೊಂದೆಡೆ ಈಗಾಗಲೇ ಸತತ ಸೋಲಿನೊಂದಿಗೆ ಪ್ಲೇಆಫ್ ರೇಸ್ ನಿಂದ ಹಿಂದೆ ಸರಿದಿರುವ ಸನ್ ರೈಸರ್ಸ್ ತವರು ನೆಲದಲ್ಲಿ ಆಡುತ್ತಿರುವ ಕೊನೆಯ ಪಂದ್ಯದಲ್ಲಿ ಗೆದ್ದರೂ ಗೌರವ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಸನ್‌ರೈಸರ್ಸ್ ಈ ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಸಂಪೂರ್ಣವಾಗಿ ವಿಫಲವಾಗಿದೆ.

    MORE
    GALLERIES

  • 77

    IPL 2023: ಗೆಲ್ಲಲೇಬೇಕಾದ ಒತ್ತಡದಲ್ಲಿ RCB, ಗೆದ್ದರೆ ಪ್ಲೇಆಫ್​ ಫಿಕ್ಸ್! ಇಲ್ಲಾ ಅಂದ್ರೆ ಏನು ಕಥೆ?

    ನಾಯಕ ಮಾರ್ಕ್ರಾಮ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ದಯನೀಯವಾಗಿ ವಿಫಲರಾದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ ಮತ್ತು ಇತರರು ತಮ್ಮ ಕಳಪೆ ಪ್ರದರ್ಶನದಿಂದ ಅಭಿಮಾನಿಗಳು ಮತ್ತು ತಂಡದ ಆಡಳಿತವನ್ನು ನಿರಾಸೆಗೊಳಿಸಿದ್ದಾರೆ.

    MORE
    GALLERIES