IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡವು 'ಸೋಲಲು ಅರ್ಹವಾಗಿದೆ' ಎಂದು ಹೇಳುವ ಮೂಲಕ ಸೋಲಿನ ಬಳಿಕ ಕೋಪಗೊಂಡಿದ್ದಾರೆ.

First published:

  • 17

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡವು 'ಸೋಲಲು ಅರ್ಹವಾಗಿದೆ' ಎಂದು ಒಪ್ಪಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 21 ರನ್‌ಗಳ ಸೋಲಿನ ನಂತರ, ವಿರಾಟ್ ತಮ್ಮ ಆಟಗಾರರು ಮೈದಾನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

    MORE
    GALLERIES

  • 27

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ವಿರಾಟ್ ಕೊಹ್ಲಿ ಸೋಲಿನ ನಂತರ ತಮ್ಮ ತಂಡದ ನೀರಸ ಪ್ರದರ್ಶನದಿಂದ ಸಂತೋಷವಾಗಲಿಲ್ಲ. ಔಟ್‌ಫೀಲ್ಡ್‌ನಲ್ಲಿ ಕೆಲವು ನಿರ್ಣಾಯಕ ಕ್ಯಾಚ್‌ಗಳನ್ನು ಕೈಬಿಟ್ಟೆವು. ಇದರ ಲಾಭ ಪಡೆದ ಕೆಕೆಆರ್ 20 ಓವರ್‌ಗಳಲ್ಲಿ 200 ಸ್ಕೋರ್ ಮಾಡಿತು. ಅದು ನಮ್ಮ ತಪ್ಪು ಎಂದು ಅವರು ಒಪ್ಪಿಕೊಂಡರು.

    MORE
    GALLERIES

  • 37

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    RCB ಫೀಲ್ಡರ್‌ಗಳು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾಗೆ ಎರಡು ಜೀವಗಳನ್ನು ನೀಡಿದರು ಮತ್ತು ಜೇಸನ್​ ರಾಯ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಹೀಗಾಗಿ ಪಂದ್ಯ ಸೋಲಲು ಪ್ರಮುಖ ಕಾರಣ ಎಂದರೆ ಅದು ನಮ್ಮ ಕಳಪೆ ಫಿಲ್ಡಿಂಗ್​ ಎಂದಿದ್ದಾರೆ.

    MORE
    GALLERIES

  • 47

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಸೋಲಲು ಅರ್ಹರಾಗಿದ್ದೆವು. ನಾವು ಇಂದು ವೃತ್ತಿಪರವಾಗಿ ಆಡಲಿಲ್ಲ. ನಾವು ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ, ಆದರೆ ಫೀಲ್ಡಿಂಗ್ ಗುಣಮಟ್ಟದಿಂದ ಕೂಡಿರಲಿಲ್ಲ. ಆರ್‌ಸಿಬಿ ಬ್ಯಾಟಿಂಗ್​ನಲ್ಲಿ ಯಾರೂ ಸಹ ಉತ್ತಮ ಜೊತೆಯಾಟವಾಡಲಿಲ್ಲ.

    MORE
    GALLERIES

  • 57

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ನಾವು ಮೈದಾನದಲ್ಲಿ ಪ್ರಮುಖ ಎರಡು ಅವಕಾಶಗಳನ್ನು ಕಳೆದುಕೊಂಡೆವು. ಇದರಿಂದಾಗಿ 25 ರಿಂದ 30 ರನ್‌ ಹೆಚ್ಚು ಬಿಟ್ಟುಕೊಟ್ಟೆವು ಎಂದು ಕೊಹ್ಲಿ ಹೇಳಿದರು. ಜೊತೆಗೆ ಗುರಿ ಬೆನ್ನಟ್ಟಿದ ವೇಳೆ ವಿಕೆಟ್ ಕಳೆದುಕೊಂಡ ನಂತರವೂ ಜೊತೆಯಾಟ ನಮ್ಮನ್ನು ಮತ್ತೆ ಪಂದ್ಯಕ್ಕೆ ಕರೆತರಬಹುದಿತ್ತು. ಆದರೆ ನಮಗೆ ಯಾವುದೇ ಉತ್ತಮ ಜೊತೆಯಾಟ ಸಿಗಲಿಲ್ಲ ಎಂದಿದ್ದಾರೆ.

    MORE
    GALLERIES

  • 67

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ಬೆಂಗಳೂರು ತಂಡವು 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 179 ರನ್​ ಗಳಿಸಿತು. ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಉತ್ತಮವಾಗಿ ಆಡಿದರು. ಅವರನ್ನು ಹೊರತುಪಡಿಸಿ ಬೇರೆ ಯಾರೂ ಸಹ ಮಿಂಚಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 37 ಎಸೆತದಲ್ಲಿ 6 ಫೋರ್​ ಮೂಲಕ 54 ರನ್​ ಗಳಿಸಿದರು.

    MORE
    GALLERIES

  • 77

    IPL 2023: ಸೋಲಿನ ಬಳಿಕ ಕೋಪಗೊಂಡ ವಿರಾಟ್ ಕೊಹ್ಲಿ, RCB ಎಡವಿದ್ದು ಇಲ್ಲೇ!

    ಪಂದ್ಯ ಸೋತರೂ ಸಹ ಆರ್​ಸಿಬಿ ಅಂಕಪಟ್ಟಿಯಲ್ಲಿ ಈವರೆಗೂ 5ನೇ ಸ್ಥಾನದಲ್ಲಿದೆ. ಆರ್​ಸಿಬಿ ಆಡಿರುವ 8 ಪಂದ್ಯದಲ್ಲಿ 4ರಲ್ಲಿ ಗೆದ್ದು 4ರಲ್ಲಿ ಸೋಲನ್ನಪ್ಪಿದೆ. ಹೀಗಾಗಿ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಇದೇ ವೇಳೆ ತಂಡದ ರನ್​ರೇಟ್​ -0.139 ಇದೆ.

    MORE
    GALLERIES